ಬೆಂಗಳೂರು: ದಿನನಿತ್ಯ ಬಳಸುವ ಸಾಮಾಗ್ರಿಗಳ ಬೆಲೆ ಮೊದಲೇ ಹೆಚ್ಚಾಗಿದ್ದು ಈಗ ಹೊಸವರ್ಷಕ್ಕೆ ಮತ್ತೆ ಬೆಲೆ ಏರಿಕೆ ಆಗುವ ಸಾಧ್ಯತೆ ಇದ್ದು ಗ್ರಾಹಕರು ಶಾಕ್ ಆಗಿದ್ದಾರೆ. ಸಾವಿರ ರೂ. ಒಳಗಿನ ಉತ್ಪನ್ನಗಳ ಮೇಲಿನ ಜಿ.ಎಸ್.ಟಿ ದರ ಶೇ.5 ರಿಂದ ಶೇ. 12ಕ್ಕೆ ಏರಲಿದೆ.
ಗಾರ್ಮೆಂಟ್ ಹಾಗೂ ರಿಟೇಲ್ ವಲಯದ ಸಂಘಟನೆಗಳು ಜಿ.ಎಸ್.ಟಿ ಏರಿಕೆ ವಿರುದ್ಧ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಹೊಸ ವರ್ಷದ ಮೊದಲ ಮೂರು ತಿಂಗಳಿನಲ್ಲಿ ಮತ್ತೊಂದು ದರ ಏರಿಕೆ ಆಗಲಿದೆ.
ಮಾರುಕಟ್ಟೆಯಲ್ಲಿ ದರ ಹೆಚ್ಚಳವಾದರೆ ಉತ್ಪನ್ನಗಳಿಗೆ ಬೇಡಿಕೆ ಕುಸಿಯಲಿದೆ. ಆಗ ಕಂಪನಿಗಳು ಉತ್ಪಾದನೆಯನ್ನು ತಗ್ಗಿಸಬೇಕಾಗುತ್ತದೆ. ಜಿ.ಎಸ್.ಟಿ ದರ ಹೇರುವುದರಿಂದಲೂ ಉದ್ಯಮದ ಮೇಲೆ ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ವರ್ಷಕ್ಕೆ ಮತ್ತೆ ಅನೇಕ ವಸ್ತುಗಳ ಬೆಲೆ ಹೆಚ್ಚುತ್ತಿರುವುದು ಗ್ರಾಹಕರ ಮೇಲೆ ದೊಡ್ಡ ಮಟ್ಟದ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.
Post a Comment