ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ರದೋಷಾಚರಣೆ

ಪ್ರದೋಷಾಚರಣೆ


ಬದಿಯಡ್ಕ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ನಿರ್ದೇಶನದಂತೆ ಲೋಕಕಲ್ಯಾಣಕ್ಕಾಗಿ ನಡೆಸಿ ಬರುತ್ತಿರುವ ಪ್ರದೋಷಾಚರಣೆಯು ಮುಳ್ಳೇರಿಯಾ ಮಂಡಲಾಂತರ್ಗತ ಚಂದ್ರಗಿರಿ ವಲಯದ ಪಯ ಘಟಕದ ಕೋಡಿ ಕೃಷ್ಣಕುಮಾರ ಭಟ್ಟರ ಮನೆಯಲ್ಲಿ ಗುರುವಾರ (ಡಿ.2) ಜರಗಿತು. 


ವಲಯ ವೈದಿಕ ಪ್ರಧಾನ ಪಯ ವೇ. ಮೂ. ಶ್ಯಾಮಕುಮಾರ ಭಟ್ಟರ ನೇತೃತ್ವದಲ್ಲಿ ವಲಯದ ರುದ್ರಾಧ್ಯಾಯಿಗಳ ಸಹಯೋಗದಲ್ಲಿ ರುದ್ರಾಭಿಷೇಕ ಪುರಸ್ಸರ ಶಿವಾರಾಧನೆ, ಮಂಡಲ ಮಾತೃಪ್ರಧಾನೆ ಶ್ರೀಮತಿ ಗೀತಾಲಕ್ಷ್ಮೀ ನೇತೃತ್ವದಲ್ಲಿ ಕುಂಕುಮಾರ್ಚನೆ, ಎಲ್ಲರೂ ಸೇರಿ ಶಿವಮಾನಸಪೂಜಾ ಸ್ತೋತ್ರ ಪಠನ, ಸೇರಿದ ರುದ್ರಪಾಠಕರಿಂದ ಸೂಕ್ತಾದಿ ಪಠನ ನೆರವೇರಿದ್ದು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.

ಮನೆಯವರು ಮತ್ತು ಸೇರಿದವರು ಮಠದ ವಿವಿಧ ಯೋಜನೆಗಳ ಬಗ್ಗೆ ದೇಣಿಗೆ ಸಮರ್ಪಿಸಿದರು.

ವರದಿ: ಎಸ್.ಕೆ.ಪಿ. ಮುಂಡೋಳುಮೂಲೆ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post