ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವೈದ್ಯರಿಂದ ಎರಡು ಪೀಳಿಗೆಗೆ ಜನ್ಮ: ಡಾ. ಹೇಮಾ ದಿವಾಕರ್

ವೈದ್ಯರಿಂದ ಎರಡು ಪೀಳಿಗೆಗೆ ಜನ್ಮ: ಡಾ. ಹೇಮಾ ದಿವಾಕರ್

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಮಾವೇಶದಲ್ಲಿ ಕೆಸಿಒಸಿ ಡೀನ್ ಅಭಿಪ್ರಾಯ




ದಾವಣಗೆರೆ: ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಗರ್ಭಿಣಿಗೆ ಹೆರಿಗೆ ಮಾಡಿಸುವ ಮೂಲಕ ಕೇವಲ ಎರಡು ಜೀವಗಳನ್ನು ಉಳಿಸುವುದಿಲ್ಲ ಬದಲಿಗೆ, ಎರಡು ಪೀಳಿಗೆಗಳಿಗೆ ಜನ್ಮ-ಮರುಜನ್ಮ ನೀಡುತ್ತಾರೆ ಎಂದು ಕೆಸಿಒಜಿ ಡೀನ್ ಮತ್ತು ಬೆಂಗಳೂರಿನ ದಿವಾಕರ್ ಸ್ಪೆಷಾಲಿಟಿ ಸೆಂಟರ್‌ನ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ಹೇಮಾ ದಿವಾಕರ್ ಅಭಿಪ್ರಾಯಪಟ್ಟರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ನಗರದ ಬಾಪೂಜಿ ಎಂಜಿನಿಯರಿಂಗ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆರಂಭವಾದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಮಾವೇಶದಲ್ಲಿ ಗರ್ಭಾವಸ್ತೆ ವೇಳೆ ನಡೆಸುವ ಪರೀಕ್ಷೆ ಮತ್ತು ಸಮಸ್ಯೆ ಪತ್ತೆಹಚ್ಚುವಿಕೆಗೆ ಸಬಂಧಿಸಿದಂತೆ ಆಗಿರುವ ಬದಲಾವಣೆಗಳ ಕುರಿತು ಉಪನ್ಯಾಸ ನೀಡಿದ ಅವರು, ಗರ್ಭಿಣಿಯರ ಬಗ್ಗೆ ಕಾಳಜಿ ವಹಿಸಿ, ರೋಗ್ಯವಂತ ಮಗುವಿನ ಜನನಕ್ಕೆ ಕಾರಣರಾಗುವ ಪ್ರಸೂತಿ ತಜ್ಞರು, ಗರ್ಭಿಣಿಯರ ಪರೀಕ್ಷೆಗಳ ಕುರಿತು ಎಚ್ಚರ ವಹಿಸಬೇಕು ಎಂದರು.


ಇತ್ತೀಚೆಗೆ ಹೆರಿಗೆ ನಂತರ ಟೈಪ್ 2 ಡಯಾಬಿಟೀಸ್‌ನಿಂದ ಬಳಲುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಈ ಕಾಯಿಲೆ ಬರುವ ಸಾಧ್ಯತೆಯನ್ನು ಮಹಿಳೆ ಗರ್ಭವತಿಯಾಗಿರುವಾಗಲೇ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವೈದ್ಯರು ಸದಾ ಜಾಗರೂಕರಾಗಿರಬೇಕು. ಮಹಿಳೆಯರು ತಮ್ಮ ಬಳಿ ಬಂದಾಗ, ತುಂಬಾ ಎಚ್ಚರಿಕೆಯಿಂದ ಪರೀಕ್ಷಿಸಬೇಕು. ಇಂತಹ ಸಂದರ್ಭಗಳಲ್ಲಿ ನಿರ್ಲಕ್ಷ್ಯ ವಹಿಸಿದರೆ ಮಗು ಜನಿಸಿದ ಒಂದು ಅಥವಾ ಎರಡನೇ ವರ್ಷಕ್ಕೆ ಮಹಿಳೆಯು ಟೈಪ್ 2 ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಸಲಹೆ ನೀಡಿದರು.


ತಂತ್ರಜ್ಞಾನ ಯುಗದಲ್ಲಿ ಪರೀಕ್ಷೆ ಮಾಡುವ ಮೂಲಕ ಎಂಥದ್ದೇ ಸಮಸ್ಯೆಯನ್ನು ಪತ್ತೆಹಚ್ಚಲು ಅವಕಾಶವಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಗರ್ಭಿಣಿಯರ ಪರೀಕ್ಷೆ ನಡೆಸಬೇಕು. ಮೊದಲ ಬಾರಿ ಪಡೆದ ವರದಿಯಲ್ಲಿ ಗೊಂದಲಗಳಿದ್ದರೆ ಎರಡನೇ ಬಾರಿ ಪರೀಕ್ಷೆ ನಡೆಸಲು ಹಿಂದೇಟು ಹಾಕಬಾರದು. ಇಲ್ಲಿ ಎಷ್ಟು ಬಾರಿ ಪರೀಕ್ಷೆ ನಡೆಸಿದ್ದೇವೆ ಎನ್ನುವುದಕ್ಕಿಂತ ರೋಗಿಯ ಸುರಕ್ಷತೆ ಮುಖ್ಯ ಎಂದರು. ಇದಕ್ಕೂ ಮುನ್ನ ಸಮಾವೇಶ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿದರು. ಕಸೋಗ ಮುಖ್ಯಸ್ಥ ಡಾ.ಎಂ.ಜಿ.ಹಿರೇಮಠ್, ಅಧ್ಯಕ್ಷ ಡಾ.ಬಸವರಾಜ ಸಜ್ಜನ್, ಗೌರವ ಕಾರ್ಯದರ್ಶಿ ಡಾ. ಭಾರತಿ ರಾಜಶೇಖರ್, ಡಾ.ಮಂಜುಳಾ ಪಾಟೀಲ್, ಡಾ.ಅರುಣ್ ಇತರರಿದ್ದರು.


ನಗರದ ಬಾಪೂಜಿ ಎಂಜಿನಿಯರಿಂಗ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆರಂಭವಾದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಮಾವೇಶದಲ್ಲಿ ಡಾ.ಹೇಮಾ ದಿವಾಕರ್ ಮಾತನಾಡಿದರು.


ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:

Dr. Hema Divakar

Consultant ObGyn and Medical Director, Divakars Speciality Hospital, Bengaluru

CEO – ARTIST for Her (Asian Research and Training Institute

for Skill Transfer)

Dean, KCOG – (Karnataka College of Obstetrics and Gynecology)

M: 9844046724 | Email: drhemadivakar@gmail.com


0 Comments

Post a Comment

Post a Comment (0)

Previous Post Next Post