ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಕಾರ್ಮಿಕನೋರ್ವ ಆಕಸ್ಮಿಕವಾಗಿ ನದಿಗೆ ಬಿದ್ದು ಮೃತಪಟ್ಟ ಘಟನೆಯೊಂದು ನಗರದ ಬಂದರ್ ದಕ್ಕೆಯಲ್ಲಿ ಮಂಗಳವಾರ ಸಂಜೆಯ ಸುಮಾರಿಗೆ ನಡೆದಿದೆ.
ಆಂಧ್ರಪ್ರದೇಶ ಮೂಲದ ಮಲ್ಲಪಲ್ಲಿ ಅಪ್ಪಯ್ಯ (36) ಮೃತ ಮೀನುಗಾರ. ಮಂಗಳವಾರ ಸಂಜೆ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದು, ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಇಂದು ಬೆಳಗ್ಗೆ ಮಲ್ಲಪಲ್ಲಿ ಅಪ್ಪಯ್ಯನ ಮೃತದೇಹ ಬಂದರ್ ದಕ್ಕೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Post a Comment