ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಲೆನಾಡು ಉತ್ಸವ: ಕೊಪ್ಪ- ಊರಲ್ಲ, "ಭಾವ"- ಕಿರು ವಾಟ್ಸಾಪ್ ಬರಹದ ಸ್ಪರ್ಧೆ

ಮಲೆನಾಡು ಉತ್ಸವ: ಕೊಪ್ಪ- ಊರಲ್ಲ, "ಭಾವ"- ಕಿರು ವಾಟ್ಸಾಪ್ ಬರಹದ ಸ್ಪರ್ಧೆ



ಮಲೆನಾಡು ಉತ್ಸವವು ಜನವರಿ14 ( ಸಂಕ್ರಾತಿ ರಜೆ ) 15 ( ಶನಿವಾರ ) ಮತ್ತು 16 ರ ಭಾನುವಾರದಂದು ಕೊಪ್ಪ ಶ್ರೀ ಬಿ. ಜಿ. ಎಸ್. ವೆಂಕಟೇಶ್ವರ ವಿದ್ಯಾಮಂದಿರದ ಕ್ಯಾಂಪಸ್ ಆವರಣದಲ್ಲಿ ನಡೆಯಲಿದೆ.

ಮಲೆನಾಡ ವಾಣಿಜ್ಯ ಪಟ್ಟಣ ಕೊಪ್ಪ. ಎಲ್ಲಾ ವಯೋಮಾನದ ಎಲ್ಲರಿಗೂ ಕೊಪ್ಪದ ಜೊತೆ ಒಂದು ನಂಟುಂಟು.  


ಜೆ.ಎಮ್.ಜೆ.ಲಿ ನೋಡಿದ ಒಂದು ಸಿನಿಮಾ, ಗಜಾನನ  ಭವನದ ಮಸಾಲೆದೋಸೆ, ಕ್ಲಾಸಿಕ್ ನ ಐಸ್ಕ್ರೀಮ್  ಕೋಪದ ವೀರಭದ್ರನ ಜಾತ್ರೆಯಲ್ಲೋ, ಬಾಳಗಡಿಯ ಕಾಲೇಜಲ್ಲೋ, ತಾಲ್ಲೂಕ್ ಆಫೀಸ್ ನ ಕೆಲಸದಲ್ಲೋ, ಕೋರ್ಟಲ್ಲೋ, ಪ್ರಶಮನಿ, ಶಮಾ ಅಸ್ಪತ್ರೆಯಲ್ಲೋ, ಆಯುರ್ವೇದಿಕ್ ಕಾಲೇಜಲ್ಲೋ, ಪುರುಷೋತ್ತಮ ಡಾಕ್ಟ್ರ ಹತ್ರ ಹಲ್ಲು ನೋವೆಂದೋ..., ಮಾರ್ಕೆಟ್ ಗಿಜಿ ಗಿಜಿಯಲ್ಲೋ, ಮೀನು ಮಾರ್ಕೆಟ್ನಲ್ಲೋ, ವೈನ್ ಶಾಪಲ್ಲೋ, ಗಂಧರ್ವದಲ್ಲೋ... ಮೇಲಿನ್ ಪೇಟೆ, ಬಸ್ ಸ್ಟ್ಯಾಂಡ್, ವಾಟರ ಟ್ಯಾಂಕ್, ಪೋಸ್ಟಾಫೀಸ್ ಸರ್ಕಲ್, ಹಳೇ ಶಂಕರ್ ಕಂಪ್ನಿ, ಸಹಕಾರ ಸಾರಿಗೆ, ಗುಣವಂತೆ, ಅಂದ್ಗಾರ್, ಘಾಟಿ....


ಪುಟ್ಟ ಪುಟ್ಟ ಸಂಗತಿಗಳಲ್ಲಿ ದೊಡ್ಡ ದೊಡ್ಡ ನೆನಪುಗಳ ರಾಶಿ ಇರ್ತದೆ.

ಈಗ ನಿಮ್ಮ ಅಂತಹ ಕೊಪ್ಪ ರಿಲೇಟೆಡ್ ನೆನಪುಗಳಿಗೆ ಅಕ್ಷರದ ರೂಪ ಕೊಡುವ ಸಮಯ ಬಂದಿದೆ.

ಯಾಕೆ ಗೊತ್ತಾ. ಈ ಸಲದ ಮಲೆನಾಡು ಉತ್ಸವ ನಡೀತಿರೋದು ನಿಮ್ಮ ಕೊಪ್ಪದಲ್ಲಿ. 

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಅದಕ್ಕಾಗೇ ಈಗಿನ ಟ್ರೆಂಡ್ ಗೆ ತಕ್ಕಂತೆ ನಿಮ್ಮ ಬೆರಳತುದಿಯ ನಿಮ್ಮ ಸಾಮ್ರಾಜ್ಯವಾದ ಮೊಬೈಲ್ ನಲ್ಲೇ ಕೊಪ್ಪದ ಕುರಿತ ಪುಟ್ಟ ಬರಹವನ್ನು ಟೈಪಿಸಿ ವ್ಯಾಟ್ಸಾಪ್ ಮಾಡಿ.


ಬರಹ 30 ರಿಂದ 100 ಶಬ್ಧಗಳ ವರೆಗೆ ಎಷ್ಟಾದರೂ ಇರಲಿ. 

ಆಪ್ತವಾಗಿರಲಿ. ಒತ್ತರಿಸಿದ ನೆನಪುಗಳ ಆರ್ದ್ರತೆ ಇರಲಿ.

ಸಬ್ಜೆಕ್ಟ್ ಏನೂ ಬೇಕಾದ್ರೂ ಆಗಿರ್ಬೋದು. ಕೊಪ್ಪಕ್ಕೆ ಸಂಬಂಧಿಸಿರಬೇಕು. 

ಅತ್ಯುತ್ತಮ ಬರಹಕ್ಕೆ ಮಲೆನಾಡು ಉತ್ಸವದ ಸಭಾ ಕಲಾಪದ ನಡುವೆ ಬಹುಮಾನವಿದೆ.

ನಿಮ್ಮ ಬರಹ ನಮಗೆ ಜನವರಿ 13ರ ಒಳಗೆ ತಲುಪಬೇಕು.


ಈ ಬರಹಗಳನ್ನು ಕೆಳಕಂಡ ವ್ಯಾಟ್ಸಾಪ್ ನಂಬರ್ ಗೆ ಕಳುಹಿಸಿ.

9449631248 - ಅರವಿಂದ ಸಿಗದಾಳ್

9448964366 ವಿಜಯರಂಗ ಕೋಟೆತೋಟ

9449961714 ಮಹಾಬಲೇಶ್ (ಬಿ.ಜಿ.ಎಸ್. ಪ್ರಾಂಶುಪಾಲರು)

9448101708 ರಮೇಶ್ ಬೇಗಾರ್. 


ಮಲೆನಾಡು ಉತ್ಸವದ ಪರವಾಗಿ

-ಅರವಿಂದ್ ಸಿಗದಾಳ್. ಮೇಲುಕೊಪ್ಪ

(ಕಿರು ಬರಹ ಸಂಯೋಜಕ)

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post