ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲಾರಿ ಮತ್ತು ಬೈಕ್ ಅಪಘಾತ; ಶಿಕ್ಷಕರಿಬ್ಬರು ಸಾವು

ಲಾರಿ ಮತ್ತು ಬೈಕ್ ಅಪಘಾತ; ಶಿಕ್ಷಕರಿಬ್ಬರು ಸಾವು

 


ಕಲಬುರ್ಗಿ: ತಾಲ್ಲೂಕಿನ ಕಡಗಂಚಿ ಸಮೀಪದಲ್ಲಿ ಆಳಂದ-ಕಲಬುರಗಿ ಮುಖ್ಯ ರಸ್ತೆಯಲ್ಲಿ ಲಾರಿ-ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಶಿಕ್ಷಕರಿಬ್ಬರು ಮೃತಪಟ್ಟಿರುವ ಘಟನೆಯೊಂದು ವರದಿಯಾಗಿದೆ.


ತಾಲ್ಲೂಕಿನ ರುದ್ರವಾಡಿ ಎಚ್.ಕೆ.ಇ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಸಿದ್ದರಾಮಪ್ಪ ರೇವಪ್ಪಗೋಳ (60) ಹಾಗೂ ಕನ್ನಡ ಶಿಕ್ಷಕ ನಾನಾಗೌಡ ಪಾಟೀಲ (55) ಸಾವಿಗೀಡಾದ ಶಿಕ್ಷಕರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಶಾಲೆ ಮುಗಿಸಿ ಕಲಬುರಗಿಯ ತಮ್ಮ ಮನೆಗೆ ತೆರಳುತ್ತಿದ್ದ ವೇಳೆಗೆ ಕಡಗಂಚಿ ಸಮೀಪದ ಮೌಂಟ್ ಕಾರ್ಮೆಲ್ ಶಾಲೆ ಹತ್ತಿರ ಎದುರಿಗೆ ಬಂದ ಲಾರಿ ನಡುವೆ ಅಪಘಾತ ಸಂಭವಿಸಿದೆ.

ಶಿಕ್ಷಕ ನಾನಾಗೌಡ ಪಾಟೀಲ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮುಖ್ಯ ಶಿಕ್ಷಕ ಸಿದ್ದರಾಮಪ್ಪ ರೇವಪ್ಪಗೋಳ ಅವರನ್ನು ಕಲಬುರಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಈ ಬಗ್ಗೆ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 Comments

Post a Comment

Post a Comment (0)

Previous Post Next Post