ಪುತ್ತೂರು:ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ,ರಾಷ್ಟ್ರೀಯ ಮಾನಸಿಕ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು, ಯುವ ಸ್ಪಂದನ ಕೇಂದ್ರ ಮಂಗಳೂರು,ನೆಹರು ಯುವ ಕೇಂದ್ರ ಮಂಗಳೂರು, ತಾಲೂಕು ಯುವ ಜನ ಒಕ್ಕೂಟ(ರಿ) ಪುತ್ತೂರು ಇವುಗಳ ಸಹಯೋಗದೊಂದಿಗೆ, ಶ್ರೀ ವಿಷ್ಣು ಯುವ ಶಕ್ತಿ ಬಳಗ(ರಿ) ಮಜ್ಜಾರಡ್ಕ ,ಗ್ರಾಮ ಪಂಚಾಯತ್ ಅರಿಯಡ್ಕ, ಇದರ ಸಂಯುಕ್ತ ಆಶ್ರಯದಲ್ಲಿ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ಡಿಸೆಂಬರ್ 19 ರಂದು ಮಜ್ಜಾರಡ್ಕದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಯುವ ಜನ ಒಕ್ಕೂಟದ ಅಧ್ಯಕ್ಷರಾದ ದಿನೇಶ್ ಸಾಲ್ಯಾನ್ ದೀಪ ಬೆಳಗಿಸುವುದರ ಮೂಲಕ ಉಧ್ಘಾಟಿಸಿ,ಕಾರ್ಯಕ್ರಮಕ್ಕೆ ಶುಭಾಹಾರೈಸಿದರು.
ಪ್ರತಿಯೊಬ್ಬರಲ್ಲೂ ಕೌಶಲ್ಯವಿದೆ ಅದನ್ನು ಕಂಡುಕೊಳ್ಳುವವರು ನಾವಾಗಬೇಕು- ಶ್ರೀಕಾಂತ್ ಪೂಜಾರಿ ಬಿರಾವು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೀವನಕೌಶಲ್ಯ ತರಬೇತುದಾರರು, ರಾಷ್ಟ್ರೀಯ ಮಾನಸಿಕ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆ ಪುತ್ತೂರು ಇದರ ಮೇಲ್ವಿಚಾರಕರು ಆಗಿರುವ ಶ್ರೀ ಕಾಂತ್ ಪೂಜಾರಿ ಅವರು ಮಾತನಾಡಿ ಬಡತನದ ಕಷ್ಟ ಅರಿವಿದ್ದರೆ ಸಾಧನೆ ಮಾಡುವ ಹಠ ತನ್ನಿಂದ ತಾನೆ ಹುಟ್ಟಿಕೊಳ್ಳುತ್ತದೆ.ಸಾಧನೆ ಮಾಡುವ ಛಲ ನಮ್ಮೊಳಗೆ ನಿರಂತರವಾಗಿರಬೇಕು. ಪ್ರತಿಯೊಬ್ಬರಲ್ಲೂ ಕೌಶಲ್ಯವಿದೆ ಅದನ್ನು ಕಂಡುಕೊಳ್ಳುವವರು ನಾವಾದಾಗ ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ಹೇಳಿದರು.
ಬೆಂಗಳೂರು ಉದ್ಯಮಿ ಲಂಬೋದರ ಪೂಂಜಾ ಕಾರ್ಯಕ್ರಮಕ್ಕೆ ಶುಭಾಹಾರೈಸಿದರು, ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಪ್ರಜ್ಞಾ ಕುಲಾಲ್ ಕಾವು, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಉಷಾ ರೇಖಾ ರೈ,ರಿತಿಕಾ ಜನಸೇವಾ ಕೇಂದ್ರದ ಶ್ರೀ ಕೃಷ್ಣಪ್ಪ, ಶ್ರೀ ವಿಷ್ಣು ಯುವಶಕ್ತಿ ಬಳಗ(ರಿ) ಮಜ್ಜಾರಡ್ಕ ಇದರ ಅಧ್ಯಕ್ಷ ರವಿಮಜ್ಜಾರ್ ,ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ ಮಯೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘಟನೆ ಸದಸ್ಯ ದೀಪಕ್ ಕೊಡಿಯಡ್ಕ ಪ್ರಾರ್ಥಿಸಿದರು,ಉದಯ್ ಕುಮಾರ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ ಮಯೂರ ವಂದಿಸಿದರು.
ಸಂಘಟನೆಯ ಸದಸ್ಯರುಗಳು,ಹಾಗೂ ಊರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.
Post a Comment