ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಶ್ರೀದೇವರ ಬಿಂಬ ಬಾಲಾಲಯದಲ್ಲಿ ಪ್ರತಿಷ್ಠೆ

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಶ್ರೀದೇವರ ಬಿಂಬ ಬಾಲಾಲಯದಲ್ಲಿ ಪ್ರತಿಷ್ಠೆ



ಮಂಗಳೂರು: ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಇದರ ಜೀರ್ಣೋದ್ಧಾರದ ಅಂಗವಾಗಿ ಡಿ. 26ರಂದು ಬಾಲಾಲಯದಲ್ಲಿ ಶ್ರೀ ವೀರನಾರಾಯಣ ದೇವರ ಬಿಂಬ ಪ್ರತಿಷ್ಠೆಯ ಕಾರ್ಯಕ್ರಮವು ಮಾಣಿಲದ ಶ್ರೀಧಾಮದ ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಅಪಾರ ಭಕ್ತರ ಕೂಡುವಿಕೆಯಲ್ಲಿ ನಡೆಯಿತು.


ಬೆಳಿಗ್ಗೆ ದೇವಸ್ಥಾನದ ತಂತ್ರಿಗಳಾಗಿರುವ ಶ್ರೀಹರಿ ಉಪಾಧ್ಯಾಯ ಅವರ ಮಾರ್ಗದರ್ಶನದಂತೆ ಪ್ರಧಾನ ಅರ್ಚಕರು ಜನಾರ್ಧನ್ ಭಟ್ ಅವರು ಶ್ರೀದೇವರಿಗೆ ವಿಶೇಷ ಪೂಜೆ ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠೆಯ ನಡೆಸಿದರು.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಬಳಿಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಬೆಂಗಳೂರು- ಮುಂಬೈ, ಹಾಗೂ ವಿವಿಧ ನಗರಗಳಿಂದ ಭಕ್ತರು ಆಗಮಿಸಿ ಕರಸೇವೆಯಲ್ಲಿ ಪಾಲ್ಗೊಂಡು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಾರಂಭಗೊಂಡಿತು.


ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘದ ಅಧ್ಯಕ್ಷ ಮಯೂರ ಉಳ್ಳಾಲ,  ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪುರುಷೋತ್ತಮ್ ಕುಲಾಲ್ ಕಲ್ಬಾವಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎ. ದಾಮೋದರ, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಬಿ ಪ್ರೇಮಾನಂದ ಕುಲಾಲ್, ಅಧ್ಯಕ್ಷರು ವೀರನಾರಾಯಣ ಸೇವಾ ಸಮಿತಿ ಅಧ್ಯಕ್ಷರಾದ ಸುಂದರ ಕುಲಾಲ್ ಶಕ್ತಿನಗರ, ದೇವಸ್ಥಾನದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಗೀತಾ ಮನೋಜ್, ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಸಾಲ್ಯಾನ್, ಹಾಗೂ ದಯಾನಂದ ಅಡ್ಯಾರ್ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಂ ಪಿ ಬಂಗೇರ, ದೇವಸ್ಥಾನ ಸಮಿತಿಯ ಕಾರ್ಯದರ್ಶಿ ನ್ಯಾಯವಾದಿ ರವೀಂದ್ರ ಮೂಲ್ಯ ಮುನ್ನಿಪಾಡಿ, ಸಂಚಾಲಕರಾದ ಸುರೇಶ್ ಕುಲಾಲ್ ಮಂಗಳಾದೇವಿ, ಸಂಘದ ಸೇವಾದಳದ ದಳಪತಿ ಕಿರಣ್‌ ಅಟ್ಲೂರು, ಭಜನಾ ಸಮಿತಿಯ ಚಂದ್ರಹಾಸ್ ಕುಲಾಲ್, ಪ್ರಚಾರ ಸಮಿತಿಯ ಗಿರಿಧರ್ ಜೆ ಮೂಲ್ಯ, ಬರ್ಕೆ ಫ್ರೆಂಡ್ಸ್ ನ ಸಂಸ್ಥಾಪಕ ಯಜ್ಞೇಶ್ ಮೂಲ್ಯ ಬರ್ಕೆ, ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಮಾಜಿ ಅಧ್ಯಕ್ಷ ಗಿರೀಶ ಸಾಲ್ಯಾನ್, ಕುಲಾಲ ಸಮಾಜದ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

(ಮಾಹಿತಿ: ದಿನೇಶ್ ಕುಲಾಲ್)


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post