ಬೆಂಗಳೂರು: ಉಪೇಂದ್ರ ನಟನೆಯ ಬಹುನಿರೀಕ್ಷಿತ 'ಕಬ್ಜ' ಚಿತ್ರಕ್ಕೆ ನಟ ಸುದೀಪ್ ಎಂಟ್ರಿಯಾಗಿದ್ದಾರೆ. ಭಾರ್ಗವ ಭಕ್ಷಿಯಾಗಿ ನಟಿಸಿರುವ ಸುದೀಪ್ ಲುಕ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಉಪೇಂದ್ರ ಮತ್ತು ಸುದೀಪ್ ಈ ಹಿಂದೆ 'ಮುಕುಂದ ಮುರಾರಿ' ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು ಇದೀಗ ಕಬ್ಜ ಚಿತ್ರದಲ್ಲೂ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಆರ್. ಚಂದ್ರು ನಿರ್ದೇಶನದ ಬಹುಭಾಷೆಯ ಕಬ್ಜ ಚಿತ್ರದಲ್ಲಿ ಸುದೀಪ್ ಭಾರ್ಗವ ಭಕ್ಷಿಯಾಗಿ ನಟಿಸಲಿದ್ದಾರೆ.
ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಇವರು ತಮ್ಮ ಫಸ್ಟ್ ಲುಕ್ ಹೇಗಿರಲಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಒಂದು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ರಿವೀಲ್ ಮಾಡಿದ್ದಾರೆ. ಕಬ್ಜ ಸಿನಿಮಾವನ್ನು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇಬ್ಬರು ಸ್ಟಾರ್ ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಕನ್ಬಡ ಚಿತ್ರರಂಗದ ಕಡೆ ಮತ್ತೆ ಎಲ್ಲರು ಲಕ್ಷ್ಯ ಹರಿಸಲು ಕಾರಣವಾಗಬಹುದು ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.
Post a Comment