ರಾಜ್ಯದಲ್ಲಿ ನಡೆದ ಸ್ಥಳೀಯ ಪುರಸಭೆ /ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ಮೂರೂ ಪಕ್ಷಗಳು ಎದೆ ಮುಟ್ಟಿ ಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಕುತೂಹಲಕಾರಿ ನಿರ್ಣಯದ ತೀರ್ಪು ಮತದಾರ ಕೊಟ್ಟಿದ್ದಾನೆ ಅನ್ನುವುದು ಅಷ್ಟೇ ಸ್ವಷ್ಟ.
ಒಟ್ಟಾರೆ ಫಲಿತಾಂಶ ನೇೂಡುವಾಗ ಕಾಂಗ್ರೆಸ್ ಗೆ ಸ್ವಲ್ಪ ಮಟ್ಟಿನ ಭರವಸೆ ತುಂಬಿದ ಫಲಿತಾಂಶ ಹೊರ ಬಿದ್ದಿದೆ ಅದೇ ರೀತಿಯಲ್ಲಿ ಅಧಿಕಾರ ರೂಢ ಬಿಜೆಪಿ ತಾನು ಎಲ್ಲಿ ಎಡವುತ್ತಿದ್ದೇನೆ ಅನ್ನುವ ಕುರಿತು ಆತ್ಮ ಚಿಂತನೆ ಮಾಡ ಬೇಕಾದ ಫಲಿತಾಂಶ ಇದು. ಬಹುಮುಖ್ಯವಾಗಿ ಬೆಳಗಾವಿ ವಿಜಯ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬಂದ ಚುನಾವಣಾ ಫಲಿತಾಂಶ ಬಿಜೆಯ ಒಳ ವೈಮನಸ್ಸು ಸೇೂಲಿಗೆ ಕಾರಣ ವಾಗಿರ ಬಹುದೇ ಅನ್ನುವ ರಾಜಕೀಯ ಗಾಳಿ ಬೀಸುವಂತಿದೆ ಈ ಫಲಿತಾಂಶ.
ಈ ಎಲ್ಲಾ ಫಲಿತಾಂಶದ ಹಿನ್ನೆಲೆಯಲ್ಲಿ ನಾನು ಈಗ ವಿಮರ್ಶಿಸಲು ಹೊರಟಿರುವುದು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರ ಕಾಪು ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಕಾಪು ಪುರಸಭಾ ಚುನಾವಣಾ ಫಲಿತಾಂಶ.
1. ಕಾಪು ಅಂದ ತಕ್ಷಣವೇ ನೆನಪಾಗುವುದು ಬಹು ಜಾತಿ ಬಹು ಧರ್ಮೀಯ ಬಹು ಸಂಸ್ಕೃತಿಯ ಮತದಾರರನ್ನು ಹೊಂದಿರುವ ಉಡುಪಿ ಜಿಲ್ಲೆಯ ಅಪರೂಪದ ಕ್ಷೇತ್ರ.
ಹಿಂದುಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ ಕೂಡಾ ಚುನಾವಣಾ ಫಲಿತಾಂಶದ ದಿಕ್ಕನ್ನು ಬದಲಾಯಿಸ ಬಲ್ಲ ಅಲ್ಪ ಸಂಖ್ಯಾತ ವಗ೯ದ ಮುಸ್ಲಿಮರು ಕ್ರಿಶ್ಚಿಯನ್ ನಿಣಾ೯ಯಕ ಪಾತ್ರ ವಹಿಸಬಲ್ಲ ಸಂಖ್ಯೆಯಲ್ಲಿ ಇರುವುದು ಈ ಹಿಂದಿನ ಫಲಿತಾಂಶದಲ್ಲೂ ಗೊತ್ತಾಗಿದೆ ಮಾತ್ರವಲ್ಲ ಇಂದಿನ ಪುರಸಭೆಯ ಫಲಿತಾಂಶದಲೂ ಸ್ವಷ್ಟವಾಗಿ ಕಾಣುತ್ತಿದೆ.
ಬಿಜೆಪಿ 12 ಕಾಂಗ್ರೆಸ್ 7 ಎಸ್‌ಡಿಪಿಐ 3 ಜೆಡಿಎಸ್ 1. ಒಟ್ಟು 23 ರಲ್ಲಿ ಬಿಜೆಪಿಗೆ ಒಂದು ಸ್ಥಾನದಲ್ಲಿ ಜಯದ ಮಾಲೆ ಕುತ್ತಿಗೆಗೆ ಬಿದ್ದಿದೆ. ಆದರೆ ವಿಜಯಮಾಲೆ ಬಿಜೆಪಿಯನ್ನು ಇನ್ನಷ್ಟು ಚಿಂತನೆಯ ಆಳಕ್ಕೆ ಇಳಿಸಬೇಕಾದ ಫಲಿತಾಂಶವೂ ಹೌದು.
2. ಇಲ್ಲಿ ಬಹುಮುಖ್ಯವಾಗಿ ಗಮನಿಸ ಬೇಕಾದದ್ದು ಬಿಜೆಪಿಯ ಬಹುಮುಖ್ಯ ಎದುರಾಳಿಯ ಅನ್ನಿಸಿಕೊಂಡ ಕಾಂಗ್ರೆಸ್ ಗೆ ತಾನು ನಂಬಿಕೊಂಡಿದ್ದ ಅಲ್ಪ ಸಂಖ್ಯಾತರ ಮತಗಳು ಈ ಬಾರಿ ಎಸ್‌ಡಿಪಿಐ ಮತ್ತು ಜೆಡಿಎಸ್ ಪಾಲಾದ ಕಾರಣ ಕಾಂಗ್ರೆಸ್ ಕೆಲವು ಸ್ಥಾನ ಕಳೆದು ಕೊಳ್ಳುವುದರ ಜೊತೆಗೆ ಬಿಜೆಪಿಯನ್ನು ಗೆಲುವಿನ ಗಡಿಗೆ ತಂದು ನಿಲ್ಲಿಸಿರುವುದು ಇದೇ ಜಾತ್ಯತೀತ ಮತಗಳು. ಇದು ಕಾಂಗ್ರೆಸ್ ಗೆ ಮೊದಲೇ ತಿಳಿದ ಕಾರಣ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸಿಗರು ಬಹು ಸಿಟ್ಟಾಗಿದ್ದು ಬಿಜೆಪಿಯ ಮೇಲಲ್ಲ, ಬದಲಾಗಿ ತಾವು ನಂಬಿ ಕೊಂಡಿದ್ದ ಜಾತ್ಯತೀತ ಮತಗಳನ್ನು ಕನ್ನ ಹಾಕಲು ಹೊರಟಿರುವ ಎಸ್‌ಡಿಪಿಐ ಮತ್ತು ಜೆಡಿಎಸ್ ನಾಯಕರ ಮೇಲೆ ಅನ್ನುವುದು ಅಷ್ಟೇ ಸತ್ಯ.
3. ಅಂತೂ ಕಾಪುವಿನ ಮಟ್ಟಿಗೆ ಮೂವರ ಜಗಳ ಬಿಜೆಪಿಗೆ ಗೆಲುವಿನ ನಗೆ ತರಿಸಿದೆ ಅನ್ನುವುದು ನೂರಕ್ಕೆ ನೂರು ಸತ್ಯ.
4. ಸ್ಥಳೀಯ ಚುನಾವಣೆ ಅಂದಾಗ ಪಕ್ಷ ಗಳಿಗ್ಗಿಂತ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯ ಇದೆ ಅನ್ನುವುದನ್ನೂ ಕೂಡಾ ಮರೆಯುವಂತಿಲ್ಲ. ಹಾಗಾಗಿ ಫಲಿತಾಂಶದ ಅಂತಿಮ ಲೆಕ್ಕಾಚಾರ ದಲ್ಲಿ ಇದನ್ನು ಕಡೆಗಣಿಸುವ ಹಾಗಿಲ್ಲ.
5.ಅಂತೂ ಗೆದ್ದವರು ಗೆಲುವಿನ ಪತಾಕಿ ಹಾರಿಸುವ ಮೊದಲು ಗೆಲುವಿನ ಕಿಟಕಿಯಲ್ಲಿ ಒಮ್ಮೆ ಇಣುಕಿ ನೇೂಡ ಬೇಕು ಅದೇ ಕಾಂಗ್ರೆಸ್ ಕೂಡ ಮುಂದಿನ ದಿನಗಳಲ್ಲಿ ತಾವೇ ಬೆಳೆಸಿದ ಜಾತ್ಯತೀತ ಮತಗಳು ತಮಗೆ ಸಡ್ಡು ಹೊಡೆದು ನಿಲ್ಲಬಹುದೇ ಅನ್ನುವ ಎಚ್ಚರಿಕೆಯನ್ನು ವಹಿಸಬೇಕಾದ ಕಾಪುವಿನ ಫಲಿತಾಂಶ ಪ್ರತಿಯೊಂದು ಪಕ್ಷಗಳು ಕಾಪಿಡಬೇಕಾದ ಕುತೂಹಲದ ಫಲಿತಾಂಶ ಅನ್ನುವುದರಲ್ಲಿ ಎರಡು ಮಾತಿಲ್ಲ.. ಅಲ್ವೇ?
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق