ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತಣ್ಣೀರು ಬಾವಿ ಟ್ರೀಪಾರ್ಕ್ ನಲ್ಲಿ ಅಗತ್ಯ ಸೌಕರ್ಯ ಒದಗಿಸಲು ಸೂಚನೆ

ತಣ್ಣೀರು ಬಾವಿ ಟ್ರೀಪಾರ್ಕ್ ನಲ್ಲಿ ಅಗತ್ಯ ಸೌಕರ್ಯ ಒದಗಿಸಲು ಸೂಚನೆ

ಮಂಗಳೂರು: ತಾಲ್ಲೂಕಿನ ಬೆಂಗರೆ - ತಣ್ಣೀರುಬಾವಿಯಲ್ಲಿರುವ ಪ್ರವಾಸೋದ್ಯಮ ತಾಣ ಟ್ರೀಪಾರ್ಕ್ ನಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ಸೂಚಿಸಿದರು. 
ಅವರು ಡಿಸೆಂಬರ್ 27 ರ ಸೋಮವಾರ ನಗರದ ಅರಣ್ಯ ಇಲಾಖೆಯ ನ್ಯಾಯಾಲಯ ಸಭಾಂಗಣದಲ್ಲಿ ತಣ್ಣೀರುಬಾವಿ ಟ್ರೀ ಪಾರ್ಕ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಪಾರ್ಕ್ ನಲ್ಲಿ ಚಾಲ್ತಿಯಲ್ಲಿರುವ ಪ್ರವೇಶ ಶುಲ್ಕ ಹಾಗೂ ಪಾರ್ಕ್ ನೊಳಗೆ ಚಲನಚಿತ್ರಗಳ ಚಿತ್ರೀಕರಣದ ಶುಲ್ಕವನ್ನು ಪರಿಷ್ಕರಿಸುವ ಅಗತ್ಯಗಳ ಬಗ್ಗೆ ಅವರು ತಿಳಿಸಿದರು. ಅಷ್ಟೇ ಅಲ್ಲದೆ ಟ್ರೀಪಾರ್ಕ್ ನಲ್ಲಿ ಮೂಲಭೂತವಾಗಿ ಅವಶ್ಯಕತೆಯಿರುವ ಸಿ.ಸಿ.ಕ್ಯಾಮೆರಾ, ಕ್ಯಾಂಟೀನ್, ಶೌಚಾಲಯಗಳ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎಸ್. ಮಾಣಿಕ್ಯ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ. ಪ್ರವೀಣ್ , ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಪ್ರಶಾಂತ್ ನಾಯ್ಕ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

0 Comments

Post a Comment

Post a Comment (0)

Previous Post Next Post