ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 'ನನಗೆ ಲೀಡರ್ ಪಟ್ಟ ಬೇಡ, ನಿಮ್ಮ ಜೊತೆ ನಾನೂ ಒಬ್ಬನಾಗಿ ಇರುತ್ತೇನೆ': ಶಿವರಾಜ್ ಕುಮಾರ್

'ನನಗೆ ಲೀಡರ್ ಪಟ್ಟ ಬೇಡ, ನಿಮ್ಮ ಜೊತೆ ನಾನೂ ಒಬ್ಬನಾಗಿ ಇರುತ್ತೇನೆ': ಶಿವರಾಜ್ ಕುಮಾರ್

ಬೆಂಗಳೂರು: ಕನ್ನಡದ ಧ್ವಜವನ್ನು ಸುಟ್ಟು ಹಾಕಿರುವ ಘಟನೆಯನ್ನು ತೀವ್ರವಾಗಿ ವಿರೋಧಿಸಿರುವ ನಟ ಶಿವರಾಜ್ ಕುಮಾರ್ "ಕನ್ನಡ ಧ್ವಜವನ್ನು ಎಲ್ಲಾ ಕನ್ನಡಿಗರು ತಾಯಿಯಂತೆ ಕಾಣಬೇಕು. ಬಾವುಟವನ್ನು ಸುಟ್ಟರೆ ಕನ್ನಡಾಂಬೆಯನ್ನು ಸುಟ್ಟಂತೆ. ಈ ರೀತಿ ಕುಕೃತ್ಯ ಮಾಡುವವರನ್ನು ಸುಮ್ಮನೆ ಬಿಡಬಾರದು" ಎಂದು ಹೇಳಿದರು.

ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ನಟ ಶಿವರಾಜ್ ಕುಮಾರ್ ಹಲವಾರು ವಿಚಾರಗಳನ್ನು ಹಂಚಿಕೊಂಡರು.

ಕನ್ನಡ ಚಿತ್ರರಂಗಕ್ಕೆ ನಾಯಕತ್ವದ ಕೊರತೆಯಿದೆ. ಶಿವಣ್ಣ ಇನ್ನು ಮುಂದೆ ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ಧ್ವನಿ ಕೇಳುಬರುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು "ನನಗೆ ನಾಯಕತ್ವ ಬೇಡ‌. ಅಪ್ಪಾಜಿಯೇ ನಮ್ಮ ನಾಯಕ. ಅವರ ಆದರ್ಶದಂತೆ ನಡೆಯೋಣ. ನಿಮ್ಮ ಜೊತೆ ನಾನೂ ಒಬ್ಬನಾಗಿ ಇರುತ್ತೇನೆ" ಎಂದು ಹೇಳಿದರು.

0 Comments

Post a Comment

Post a Comment (0)

Previous Post Next Post