ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ವತಿಯಿಂದ ನೀಡಲಾಗುವ 'ನಾರಾಯಣ ಗುರು ಸಂಶೋಧನಾ ಪ್ರಶಸ್ತಿ'ಗೆ ಉಪನ್ಯಾಸಕ, ಸಂಶೋಧಕ, ತುಳು-ಕನ್ನಡ ವಾಗ್ಮಿ ಡಾ. ಅರುಣ್ ಉಳ್ಳಾಲ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 10 ಸಾವಿರ ರೂ ನಗದು ಬಹುಮಾನವನ್ನು ಹೊಂದಿದ್ದು, ಪುರಸ್ಕೃತ ಕೃತಿಯು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮೂಲಕ ಮುದ್ರಣಗೊಂಡು ಪ್ರಶಸ್ತಿ ಪ್ರದಾನದ ದಿನ ಬಿಡುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಅರುಣ್ ಉಳ್ಳಾಲ್, ಭಗವತಿ ಆರಾಧನೆ- ಸಾಂಸ್ಕೃತಿಕ ಅಧ್ಯಯನ ವಿಷಯದಲ್ಲಿ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ, ತುಳುನಾಡಿನ ಚರಿತ್ರೆ ವಿಷಯವಾಗಿ ಹಂಪಿ ವಿವಿಯಿಂದ ಎಂ.ಫಿಲ್ ಪದವಿ ಮತ್ತು ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment