ಮಂಗಳೂರು: ತಾಲೂಕು ಚುಟುಕು ಸಾಹಿತ್ಯ ಪರಿಷತ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ್ 25ರಂದು ಮಂಗಳೂರಿನ ಕೆನರಾ ಕಾಲೇಜು ಸಭಾಂಗಣದಲ್ಲಿ ಹಿರಿಯ ಲೇಖಕ ಜಯಪ್ರಕಾಶ್ ಪುತ್ತೂರು ಅವರ 'ಫೇಸ್ಬುಕ್ ಪ್ರಪಂಚ- ಜನಸಾಮಾನ್ಯರು ಬಹುಮಾನ್ಯರು' ಕೃತಿಯ ಲೋಕಾರ್ಪಣೆ, ಚುಟುಕು ಸಾಹಿತ್ಯ ಪರಿಷತ್ತಿನ 8ನೇ ದ.ಕ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಹಾಗೂ ಕಾವ್ಯ ಕಸ್ತೂರಿ ಕವಿಗೋಷ್ಠಿಯನ್ನು ಆಯೋಜಿಸಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋವಿಂದದಾಸ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಪಿ. ಕೃಷ್ಣಮೂರ್ತಿ ಅವರು ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಸಾಹಿತ್ಯ ಪೋಷಕ ಸಂಘಟಕ ಗುರುಪ್ರಸಾದ್ ಕಡಂಬಾರ್ ಅವರು ಜನವರಿ 30ರಂದು ನಡೆಯುವ ಚುಸಾಪ ಜಿಲ್ಲಾ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸುವರು. ಜನಪ್ರಿಯ ಕವಿ ಉಪನ್ಯಾಸಕ ರಘು ಇಡ್ಕಿದು ಅವರು ಕೃತಿ ಪರಿಚಯ ಮಾಡುವರು. ಫೇಸ್ಬುಕ್ ಪ್ರಪಂಚ ಕೃತಿಯ ಲೇಖಕ ಜಯಪ್ರಕಾಶ್ ಪುತ್ತೂರು, ಮಂಗಳೂರು ಅಪರಾಧ ಮತ್ತು ಸಂಚಾರ ಪೊಲೀಸ್ ಉಪ ಆಯುಕ್ತರಾದ ಬಿ.ಪಿ ದಿನೇಶ್ ಕುಮಾರ್, ಲಾಂಛನ ವಿನ್ಯಾಸಗೊಳಿಸಿರುವ ರಾಜೇಶ್ ಶೆಟ್ಟಿ ದೋಟ, ದ.ಕ ಚುಸಾಪ ಜೆಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಮಂಗಳೂರು ತಾಲೂಕು ಚುಸಾಪ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಉಪಸ್ಥಿತರಿರುವರು.
ಬಳಿಕ ಅಶೋಕ ಎನ್ ಕಡೇಶಿವಾಲಯ ಅವರ ಅಧ್ಯಕ್ಷತೆಯಲ್ಲಿ ಕಾವ್ಯ ಕಸ್ತೂರಿ ಕವಿಗೋಷ್ಠಿ ನಡೆಯಲಿದ್ದು ರೇಮಂಡ್ ಡಿಕುನಾ, ಅರ್ಚನಾ ಎಂ.ಬಂಗೇರಾ ಕುಂಪಲ, ಲತೀಶ್ ಎಂ ಸಂಕೊಳಿಗೆ, ಸೌಮ್ಯ ಆರ್ ಶೆಟ್ಟಿ, ಗುಣಾಜೆ ರಾಮಚಂದ್ರ ಭಟ್, ಚಂದ್ರ ಪ್ರಭಾವತಿ, ಗೋಪಾಲಕೃಷ್ಣ ಶಾಸ್ತ್ರಿ, ಜೀವಪರಿ, ಡಾ.ಸುರೇಶ್ ನೆಗಳಗುಳಿ, ವಾಣಿ ಲೋಕಯ್ಯ, ಬಾಲಕೃಷ್ಣ ಕೇಪುಳು, ರಶ್ಮಿ ಸನಿಲ್, ಬದ್ರುದ್ದೀನ್ ಕೂಳೂರು, ಮಂಜುಶ್ರೀ ಎನ್ ನಲ್ಕ, ಹಿತೇಶ್ ಕುಮಾರ್ ಎ., ಡಾ.ವಾಣಿಶ್ರೀ, ವೆಂಕಟೇಶ್ ಗಟ್ಟಿ, ಆಕೃತಿ ಐ ಎಸ್ ಭಟ್, ಎಂ ಪಿ ಬಶೀರ್ ಅಹ್ಮದ್, ನಳಿನಾಕ್ಷಿ ಉದಯರಾಜ್, ವಿಘ್ನೇಶ್ ಭಿಡೆ, ಅರುಣಾ ನಾಗರಾಜ್, ರೇಖಾ ಸುದೇಶ್ ರಾವ್, ಮಾನಸ ಪ್ರವೀಣ್ ಭಟ್, ರೇಖಾ ನಾರಾಯಣ್, ಸೌಮ್ಯ ಗೋಪಾಲ್, ಗುರುರಾಜ್ ಎಂ.ಆರ್, ಉಮೇಶ್ ಶಿರಿಯಾ ಹಾಗೂ ವಿದ್ಯಾಶ್ರೀ ಅಡೂರು ಕವಿಗಳಾಗಿ ಭಾಗವಹಿಸಲಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment