ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೀನಿನ ವಾಹನ ಕಂಬಕ್ಕೆ ಡಿಕ್ಕಿ; ಚಾಲಕ ಸಾವು

ಮೀನಿನ ವಾಹನ ಕಂಬಕ್ಕೆ ಡಿಕ್ಕಿ; ಚಾಲಕ ಸಾವು



ಉಡುಪಿ: ರಸ್ತೆಯ ಅಡ್ಡಲಾಗಿ ಬಂದ ವೃದ್ಧನನ್ನು ತಪ್ಪಿಸಲು ಹೋಗಿ ಮೀನಿನ ವಾಹನವೊಂದು ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ ಘಟನೆಯೊಂದು ಸಂತೆಕಟ್ಟೆಯ ಬಳಿ ಮಂಗಳವಾರ ನಡೆದಿದೆ.

ಮೃತ ಚಾಲಕನನ್ನು ತೌಫೀಕ್ (28) ಎಂದು ಗುರುತಿಸಲಾಗಿದೆ.

ಮೀನಿನ ಲಾರಿ ರಾಷ್ಟೀಯ ಹೆದ್ದಾರಿ 66 ರಲ್ಲಿ ಸಂತೆಕಟ್ಟೆಯ ಹತ್ತಿರ, ರಾತ್ರಿ 1:00 ಗಂಟೆಯ ವೇಳೆ ಹೋಗುತ್ತಿದ್ದಾಗ ರಸ್ತೆಗೆ ಅಡ್ಡಲಾಗಿ ವೃದ್ಧರೊಬ್ಬರು ಬಂದಿದ್ದು ಆ ಸಮಯದಲ್ಲಿ ವೇಗದಲ್ಲಿದ್ದ ವಾಹನ, ವೃದ್ಧನನ್ನು ತಪ್ಪಿಸಲು ಹೋಗಿ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಚಾಲಕ ಸಾವನ್ನಪ್ಪಿದ್ದು, ಕ್ಲೀನರ್ ಸಣ್ಣಪುಟ್ಟ ಗಾಯದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

0 Comments

Post a Comment

Post a Comment (0)

Previous Post Next Post