ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಡೆತ್ ನೋಟ್ ಬರೆದು ಆತ್ಮಹತ್ಯೆ ಗೆ ಶರಣು

ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಡೆತ್ ನೋಟ್ ಬರೆದು ಆತ್ಮಹತ್ಯೆ ಗೆ ಶರಣು

 


ಚೆನ್ನೈ:  ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.

ಚೆನ್ನೈನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ತನ್ನ ಡೆತ್ ನೋಟ್‌ ನಲ್ಲಿ ಇಡೀ ಹೆಣ್ಣು ಜನ್ಮದ ನೋವನ್ನ ಹೇಳಿದ್ದಾಳೆ. ಶಾಲೆ ಸೇರಿದಂತೆ ಯಾವುದೇ ಜಾಗದಲ್ಲೂ ಹೆಣ್ಣು ಮಕ್ಕಳು ಸೇಫ್ ಅಲ್ಲವೇ ಅಲ್ಲ. ಎಲ್ಲೂ ಈಕೆಗೆ ಸುರಕ್ಷತೆ ಇಲ್ಲವೇ ಇಲ್ಲ ಅಂತಲೇ ಬರೆದಿದ್ದಾಳೆ.


ಪಡಂಬಾಕ್ಕಂನ ಸರ್ಕಾರಿ ಶಾಲೆಯ ಈ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಕೂಡಲೇ, ಕಾಲೇಜಿನ ಇತರ ವಿದ್ಯಾರ್ಥಿನಿಯರು ಕಾಲೇಜಿನ ಪ್ರೊಫೆಸರ್ ಅಬ್ರಹಾಂ ಅಲೆಕ್ಸ್ ವಿರುದ್ಧವೇ ಪ್ರತಿಭಟನೆ ಮಾಡಿದ್ದಾರೆ. ಪ್ರೋಫೆಸರ್ ವರ್ತನೆ ಸರಿಯಿಲ್ಲ ಅಂತಲೂ ದೂರಿದ್ದಾರೆ.


ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯಿಂದ ಪೊಲೀಸರು 48 ವರ್ಷದ ಫ್ರೊಫೆಸರ್ ನ್ನು ಬಂಧಿಸಿ ಕೇಸ್ ದಾಖಲಿಸಿದ್ದಾರೆ.


0 Comments

Post a Comment

Post a Comment (0)

Previous Post Next Post