ಬೆಂಗಳೂರು: ಜೊತೆಜೊತೆಯಲಿ ಧಾರಾವಾಹಿ ಮೂಲಕ ಜನರ ಮನಸ್ಸನ್ನು ಗೆದ್ದ ನಟ ಅನಿರುದ್ಧ ಜತ್ಕರ್ ಇದೀಗ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಕುರಿತು ಮಾಡಿದ ಸಾಕ್ಷ್ಯಚಿತ್ರದ ಮೂಲಕ ಮತ್ತೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅನಿರುದ್ಧ ಅವರು " ಮೊದಲನೆಯದಾಗಿ ನನ್ನ ಸಾಕ್ಷ್ಯಚಿತ್ರ ' ಬಾಳೇ ಬಂಗಾರ' ವು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ , ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಲಾಂ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆಗಳನ್ನು ಸ್ಥಾಪಿಸಿರುವುದು ನಿಜವಾಗಿಯೂ ತುಂಬಾ ಖುಷಿ ಹಾಗೂ ಹೆಮ್ಮೆ ಪಡುವ ವಿಚಾರ. ದಾಖಲೆ ಹಾಗೂ ವರ್ಣನೆಯ ಬದುಕಿರುವ ಮೇರು ನಟಿಯೊಬ್ಬರ ಕುರಿತಾದ ಅತ್ಯಂತ ದೀರ್ಘಾವಧಿಯ ಸಾಕ್ಷ್ಯಚಿತ್ರ ಇದಾಗಿದೆ" ಎಂದು ಹೇಳಿದ್ದಾರೆ.
ಈ ಡಾಕ್ಯುಮೆಂಟರಿ 141 ನಿಮಿಷಗಳ ಕಾಲವಿದ್ದು ಇದರ ಮಾಹಿತಿ ಸಂಶೋಧನೆ, ಲೇಖನ, ನಿರೂಪಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಅನಿರುದ್ಧ ಅವರು ನಿರ್ವಹಿಸಿದ್ದಾರೆ. ಆಂಗ್ಲಭಾಷೆಯ ಅಡಿಬರಹವಿದ್ದು ಗಾಯಕ ಗುರುಕಿರಣ್ ಇದಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ.
Post a Comment