ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 "ಬಡವ ರಾಸ್ಕಲ್ " ರಿಲೀಸ್ ದಿನ ಮುಂದೂಡಿಕೆ

"ಬಡವ ರಾಸ್ಕಲ್ " ರಿಲೀಸ್ ದಿನ ಮುಂದೂಡಿಕೆ


ಇತ್ತೀಚೆಗೆ ಬಿಡುಗಡೆಯಾದ " ರತ್ನನ್ ಪ್ರಪಂಚ" ಸಿನಿಮಾ ಅನೇಕ ಅಭಿಮಾನಿಗಳ ಮನಸ್ಸನ್ನು ಗೆದ್ದಿತ್ತು. ಅದರಲ್ಲಿ ನಾಯಕ ನಟನಾಗಿ ಅಭಿನಯಿಸಿದ ಡಾಲಿ ಧನಂಜಯ್ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದರು.

ಇದೀಗ ಅವರ ಅಭಿನಯದ " ಬಡವ ರಾಸ್ಕಲ್" ಸಿನಿಮಾ ಬಿಡುಗಡೆಗೆ ಮೊದಲೇ ಎಲ್ಲರ ಬಾಯಲ್ಲಿ ಗುಣುಗುಡುತ್ತಿದೆ. ಈ ಚಿತ್ರದ ಟ್ರೈಲರ್ ಡಿಸೆಂಬರ್ 9ಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. 

ಇದೀಗ ನಟ ಡಾಲಿ ಧನಂಜಯ್ ಅವರು ಟ್ರೈಲರ್ ದಿನಾಂಕವನ್ನು ಮುಂದೂಡುವುದಾಗಿ ತಿಳಿಸಿದ್ದಾರೆ‌. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಈ ಸಿನಿಮಾ ಉತ್ತಮವಾಗಿ ಮೂಡಿ ಬರಲಿದೆ ಎಂಬ ವಿಶ್ವಾಸವನ್ನು ಇಡೀ ಚಿತ್ರತಂಡ ನೀಡಿದೆ.

"ಬಡವ ರಾಸ್ಕಲ್' ಸಿನಿಮಾ ಇನ್ನು ಡಿಸೆಂಬರ್ 13ಕ್ಕೆ ರಿಲೀಸ್ ಆಗಲಿದೆ. ಅಡಚಣೆಗಾಗಿ ಕ್ಷಮೆಯಿರಲಿ, ನಿಮ್ಮ ಪ್ರೀತಿ ಸದಾ ಹೀಗೆ ಇರಲಿ" ಎಂದು ಟ್ವೀಟ್ ಮಾಡಿದ್ದಾರೆ.

0 Comments

Post a Comment

Post a Comment (0)

Previous Post Next Post