ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಂಜಾನೆಯೊಂದು ಬೆಳಕಿನ ಮಾತು

ಮುಂಜಾನೆಯೊಂದು ಬೆಳಕಿನ ಮಾತು

 



ದೇಶದಲ್ಲಿ ಸಾವಿರಾರು ಸಾವು ನೋವುಗಳ ನೈಜ ಚಿತ್ರಣ ಕಳೆದ ವರ್ಷವಷ್ಟೇ ನೋಡಿದ್ದೆವು. ಪ್ರಕೃತಿ ನಿಧಾನವಾಗಿ ತನಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾಳೆ. ಒಂದೆಡೆ ಭೂಕುಸಿತ ಮತ್ತೊಂದೆಡೆ ಗ್ಯಾಸ್ ಸಿಲಿಂಡರ್ ಸ್ಫೋಟ, ಇನ್ನು ಮತ್ತೆ ಹೊಸ ರೂಪಾಂತರಿಯ ಜನನ. ಹೇಳಿದಷ್ಟು ಮುಗಿಯದಷ್ಟು ನೋವು ಬವಣೆಗಳು. ಇವೆಲ್ಲದರ ನಡುವೆ ಮನಸ್ಸು ಧೃತಿಗೆಡದಿರಲು ಸ್ಫೂರ್ತಿಯ ಮಾತುಗಳು ಆಶಾಕಿರಣವಾಗಬಹುದು. 

ನೊಂದು ಬೆಂದು ಜೀವನವೇ ಕಷ್ಟದ ಬಂಡಿ ಆಗಿದೆ ಎನ್ನುವವನಿಗೆ ನಮ್ಮ ಭರವಸೆಯ ಮಾತು ಧೈರ್ಯ ತಂದು ಕೊಡಬಹುದು. ಪ್ರಕೃತಿಯ ಏರುಪೇರಿಗೆ ಸಮನಾಗಿ ನಮ್ಮಲ್ಲೂ ಋಣಾತ್ಮಕ ಭಾವವೇಕೆ ಅಲ್ಲವೇ? ಒಬ್ಬರಿಗೊಬ್ಬರು ಧನಾತ್ಮಕ ಚಿಂತನೆಯ ಮಂಥನದಲ್ಲಿ ತೊಡಗಿಕೊಂಡರೆ ಅಲ್ಲಿ ಕಣ್ಣೀರಿಗೆ ಜಾಗವೆಲ್ಲಿದೆ ಅಲ್ಲವೇ...  ಮುಂಜಾನೆಯಿಂದ ಹಿಡಿದು ಸಂಜೆವರೆಗೆ ದುಡಿದು ಬರುವ ಮನೆಯ ಯಾವುದೇ ಸದಸ್ಯರಿರಲಿ ಅವರೊಂದಿಗೆ ನಾಲ್ಕು ಒಳ್ಳೆಯ ಮಾತನಾಡಿ ನೋಡಿ. ಅದೆಷ್ಟ ನಿರಾಳತೆ ಅವರನ್ನು ಆವರಿಸುತ್ತದೆ ಗೊತ್ತೇ? ಹಣದಲ್ಲೇ ಎಲ್ಲ ಅನ್ನುವವರು ನಗು, ಉತ್ತಮ ಮಾತಿನ ಪ್ರಯೋಜನ ತಿಳಿದುಕೊಳ್ಳಲೇಬೇಕು. ನಮ್ಮನ್ನು ಪ್ರೇರೇಪಿಸಲು ಕೈ ಹಿಡಿದು ಒಬ್ಬರಿಗೊಬ್ಬರು ವಿಶ್ವಾಸದ ಮಾತನಾಡಿ. ಅದು ಬೆಳಕಿನ ಕಿರಣವಾಗಿ ಬದುಕನ್ನು ಆವರಿಸಬಹುದಲ್ಲವೆ?

ಅರ್ಪಿತಾ ಕುಂದರ್

0 Comments

Post a Comment

Post a Comment (0)

Previous Post Next Post