ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಲ್ಲು ಅರ್ಜುನ್ ಸಿನಿಮಾಕ್ಕೆ ಸಲ್ಮಾನ್ ಖಾನ್ ಬೆಂಬಲ

ಅಲ್ಲು ಅರ್ಜುನ್ ಸಿನಿಮಾಕ್ಕೆ ಸಲ್ಮಾನ್ ಖಾನ್ ಬೆಂಬಲ

 




ಅಲ್ಲು ಅರ್ಜುನ್ ಅಭಿನಯದ " ಪುಷ್ಪ" ಚಿತ್ರವು ಇದೇ ಡಿಸೆಂಬರ್ 17ರಂದು ವಿಶ್ವದಾದ್ಯಂತ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ನಿರ್ದೇಶಕ ಸುಕುಮಾರ್ ಜೊತೆ ಇದೀಗ ಮೂರನೇ ಸಿನಿಮಾ ಮಾಡುತ್ತಿರುವ ಅಲ್ಲು ಅರ್ಜುನ್ ನೂರಾರು ಕೋಟಿ ಬಜೆಟ್ ನಲ್ಲಿ ಸಿದ್ಧಗೊಳ್ಳುತ್ತಿದೆ. " ಪುಷ್ಪ" ಚಿತ್ರದ ಫ್ರೀ - ರಿಲೀಸ್ ಇವೆಂಟ್ ಕೂಡ ನಡೆಯಲಿದ್ದು ಇದಕ್ಕೆ ಅತಿಥಿಯಾಗಿ ಸಲ್ಮಾನ್ ಖಾನ್ ಹಾಗೂ ಪ್ರಭಾಸ್ ಆಗಮಿಸಲಿದ್ದಾರೆ. ಮೊದಲಿನಿಂದಲೂ ಅಲ್ಲು ಅರ್ಜುನ್ ಜೊತೆ ಉತ್ತಮ ಒಡನಾಟ ಹೊಂದಿರುವ ಇವರು ಇದೀಗ ಅವರ ಸಿನಿಮಾಕ್ಕೆ ಕೂಡ ಸಪೋರ್ಟ್ ಮಾಡುತ್ತಿರುವಿದು ಅಭಿಮಾನಿಗಳಿಗೂ ಖುಷಿಯ ವಿಚಾರವಾಗಿದೆ. ಡಿಸೆಂಬರ್ 6ರಂದು ಚಿತ್ರದ ಟ್ರೈಲರ್ ಕೂಡ ಬಿಡುಗಡೆಗೊಳ್ಳಲಿದ್ದು ಇವರೆಲ್ಲರನ್ನೂ ಒಂದೇ ವೇದಿಕೆಯಲ್ಲಿ ನೋಡಲು ಫ್ಯಾನ್ಸ್ ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ ಎನ್ನಬಹುದು. 

0 تعليقات

إرسال تعليق

Post a Comment (0)

أحدث أقدم