ಬದಿಯಡ್ಕ: ಸೌಂದರ್ಯ ಲಹರಿ ಉಪಾಸನಾ ಮಂಡಳಿ, ತಿರುವನಂತಪುರಂ ಇವರು ದಿನಾಂಕ 19.11.2021 ರಂದು ಕೇರಳ ರಾಜ್ಯಾದ್ಯಂತ ಸಾವಿರ ಕೇಂದ್ರಗಳಲ್ಲಿ ಏಕಕಾಲದಲ್ಲಿ ಯೋಜಿಸಿದ "ಶ್ರೀ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರೀ" ಸಾಮೂಹಿಕ ಪಾರಾಯಣ ಕಾರ್ಯಕ್ರಮವು ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಪ.ಪೂ.ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವೇದಮೂರ್ತಿ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ನಡೆಯಿತು.
ಮುಳ್ಳೇರಿಯಾ ಮತ್ತು ಮಂಗಳೂರು ಹವ್ಯಕ ಮಂಡಲದ ಮಾತೆಯರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು ಭಕ್ತಾದಿಗಳು ಪಾಲ್ಗೊಂಡಿದ್ದರು. ಪಾರಾಯಣದ ನಂತರ ಪೂಜ್ಯ ಶ್ರೀಗಳು "ಸ್ತೋತ್ರ ಪ್ರಿಯಳಾದ ಜಗನ್ಮಾತೆಯನ್ನು ಸೌಂದರ್ಯ ಲಹರೀ ಪಾರಾಯಣದ ಈ ಸತ್ಕರ್ಮದ ಮೂಲಕ ಆರಾಧಿಸಿದ ಸರ್ವರಿಗೂ ಶ್ರೇಯಸ್ಸಾಗಲಿ" ಎಂದು ಹಾರೈಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment