ದಾವಣಗೆರೆ: ಪುನೀತ್ ಸಾವಿನಿಂದ ಬೇಸತ್ತು ದಾವಣಗೆರೆಯಲ್ಲಿ ಓರ್ವ ಅಭಿಮಾನಿ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ದಾವಣಗೆರೆಯ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ಸಿ. ಕುಮಾರ್ (25)ವರ್ಷ ಆತ್ಮಹತ್ಯೆ ಮಾಡಿಕೊಂಡ ಪುನೀತ್ ಅಭಿಮಾನಿ.
ಈತ ವಿಜಯನಗರ ಬಡಾವಣೆಯ ಸಾಯಿ ಮಂದಿರ ಸಮೀಪದ ನಿವಾಸಿ. ಈತ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ.
ನವೆಂಬರ್ 2ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ದಾವಣಗೆರೆಯ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ
Post a Comment