ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 *ಅಂಧಕಾರ ಕಳೆಯೋ ದೀಪಾವಳಿ*

*ಅಂಧಕಾರ ಕಳೆಯೋ ದೀಪಾವಳಿ*

 


ದುರಿತಗಳಿಂದ ಬೇಸತ್ತ ಜನತೆಗೆ

ದಣಿವರಿಯದ ರೈತರ ಬಾಳಿಗೆ

ಹಗಲು ರಾತ್ರಿ ದೇಶ ಕಾಯ್ವ ಯೋಧರಿಗೆ

ಹೊಸ ಹುರುಪು ತರಲಿ ಈ ದೀಪಾವಳಿ.

    ಮನದ ಮನೋಭಿಲಾಷೆಯು

    ಮನೆಯ ಸಂಕಷ್ಟ ದೂರಾಗಲೂ

    ಮನಸ್ಸಿಗೆ ಸಂತಸದ ಹೊನಲು

    ಹೊತ್ತು ಬರಲಿ ಈ ದೀಪಾವಳಿ.

ಸಮೃದ್ಧಿ ತುಂಬಿದ

ಧರಣಿಗೆ ಆನಂದ ಹೆಚ್ಚಿಸುವ

ಪ್ರಕೃತಿ ವಿಕೋಪಗಳಿಂದ ಮುಕ್ತಿ ನೀಡುವ

ಪರಿಸರ ಸ್ನೇಹಿಯಾಗಿರಲಿ ದೀಪಾವಳಿ.

     ಹಬ್ಬದ ಮಹತ್ವವರಿತು

     ದೇಶದ ಸಂಸ್ಕೃತಿಯ ತಿಳಿದು

     ಸಂಸ್ಕಾರ ನಂಬಿಕೆಯ ಉಳಿಸಲು

     ಅಂಧಕಾರ ಕಳೆಯೋ ದೀಪಾವಳಿ ನಮ್ಮದಾಗಲಿ.

ಹಚ್ಚಿರುವೆ ನಾನು ಮಣ್ಣಿನ ಹಣತೆಯ

ಇಟ್ಟಿರುವೆ ಹತ್ತಿಯ ಬತ್ತಿಯ

ಹಾಕಿರುವೆ ದೇಶೀಯ ಗಾಣದ ಎಣ್ಣೆಯ

ಹೆಚ್ಚಿಸಲು ನಮ್ಮ ದೇಶದ ಘನತೆಯ.


        ✒️ನಾರಾಯಣ. ಕುಂಬ್ರ

        ಲ್ಯಾಬ್ ಸಹಾಯಕರು,

        ರಸಾಯನ ಶಾಸ್ತ್ರ ವಿಭಾಗ

        ವಿವೇಕಾನಂದ ಕಾಲೇಜು.

        ನೆಹರು ನಗರ, ಪುತ್ತೂರು.

0 Comments

Post a Comment

Post a Comment (0)

Previous Post Next Post