ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಬೋಧ ಪ್ರೌಢಶಾಲೆ ಪಾಣಾಜೆಯಲ್ಲಿ ಸ್ವಚ್ಛತಾ ಶ್ರಮದಾನ

ಸುಬೋಧ ಪ್ರೌಢಶಾಲೆ ಪಾಣಾಜೆಯಲ್ಲಿ ಸ್ವಚ್ಛತಾ ಶ್ರಮದಾನ



ಪಾಣಾಜೆ: ಪಾಣಾಜೆ ಸುಬೋಧ ಪ್ರೌಢಶಾಲೆಯ ಹೆಮ್ಮೆಯ ಹಿರಿಯ ವಿದ್ಯಾರ್ಥಿ, ದಯಾನಂದ ಟಿ ಮುಖಂಡತ್ವದ ತಂಡ- Bad Boys Tug Of War ತೂಂಬಡ್ಕ, ಪಾಣಾಜೆ, ಇಂದು ಸುಬೋಧ ಪ್ರೌಢ ಶಾಲೆಯ ಪರಿಸರವನ್ನು ತುಂಬ ಶ್ರಮವಹಿಸಿ ಸ್ವಚ್ಚಗೊಳಿಸಿ, ಹೆಸರಲ್ಲೇನಿದೆ... ಇರುವುದೆಲ್ಲ ಕಾರ್ಯದಲ್ಲಿ... ಎಂಬುದನ್ನು ತೋರಿಸಿಕೊಟ್ಟರು.


ಶ್ರಮದಾನದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಸುರೇಶ್ ಎಂ, ವಿನಯ್ , ಸಾತ್ವಿಕ್, ವಿನೋದ್ ರಾಜ್, ಮನೋಜ್ ಕುಮಾರ್, ದಯಾನಂದ ಟಿ, ಸತೀಶ ಟಿ, ಸುನಿಲ್ ಪಿ, ಗುರುಪ್ರಸಾದ್ ಮತ್ತು ದೇವಿಪ್ರಸಾದ್ ಭಾಗವಹಿಸಿದ್ದರು. ಶಾಲಾ ವತಿಯಿಂದ ಫಲಾಹಾರ ಹಾಗೂ ಸಿಹಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.


ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಹಾಗೂ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಭರತೇಶ ಸಹಕರಿಸಿದರು. ಶಾಲಾ ಆಡಳಿತ ಮಂಡಳಿ, ಸಂಚಾಲಕರು, ಮುಖ್ಯೋಪಾಧ್ಯಾಯರು, ಅಧ್ಯಾಪಕರು ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ತಂಡದ ಸದಸ್ಯರನ್ನು ಹಾರ್ದಿಕವಾಗಿ ಅಭಿನಂದಿಸಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post