ಅದಮಾರು: ಎಲ್ಲೂರು ಕಾಶೀ ಸಂತಾನ ಟ್ರಸ್ಟ್ ನ ನೂತನ ಕಚೇರಿ ಆರಂಭ ಹಾಗೂ ಒಂದೂವರೆ ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ- ಸಹಾಯ ಧನ ವಿತರಿಸುವ ಕಾರ್ಯಕ್ರಮವು ಅದಮಾರಿನ ಸರ್ವೋದಯ ಸಮುದಾಯ ಭವನದಲ್ಲಿ ನಡೆಯಿತು.
ಸರ್ವೋದಯ ಸಮುದಾಯ ಭವನ ಪಾರ್ಶ್ವದಲ್ಲಿ ಕಾಶೀ ಸಂತಾನ ಟ್ತಸ್ಟ್ ನೂತನ ಕಚೇರಿಯ ನಾಮ ಫಲಕವನ್ನು ಆದರ್ಶ ಸಂಘಗಳ ಒಕ್ಕೂಟದ ಅಧ್ಯಕ್ಷ ಎರ್ಮಾಳು ಉದಯ ಕೆ.ಶೆಟ್ಟಿ ಅನಾವರಣಗೊಳಿಸಿದರು. ಟ್ರಸ್ಟ್ ನ ಸಂಸ್ಥಾಪಕ ವೈ.ಎಂ. ಶ್ರೀಧರ ರಾವ್ ನೂತನ ಕಚೇರಿಯಲ್ಲಿ ದೀಪ ಬೆಳಗಿಸಿದರು.
ಸಮುದಾಯ ಭವನದಲ್ಲಿ ನಡೆದ ವಿದ್ಯಾರ್ಥಿ ವೇತನ- ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಸಮುದಾಯ ಭವನದ ಅಧ್ಯಕ್ಷ ಕೆ.ಎಲ್. ಕುಂಡಂತಾಯ ದೀಪ ಬೆಳಗಿ ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪುಣೆ ಉದ್ಯಮಿ ನಾರಾಯಣ ಕೆ. ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿದ್ದರು. ಟ್ರಸ್ಟ್ ಧರ್ಮದರ್ಶಿ ಜನಾರ್ದನರಾವ್ ಬೀಡು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಹಾಯಧನ ವಿತರಿಸಿದರು.
ಟ್ರಸ್ಟ್ ನ ಉಪಾಧ್ಯಕ್ಷ ಉದಯ ಭಾಸ್ಕರರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಸುದರ್ಶನ ವೈ ಎಸ್. ಪ್ರಸ್ತಾವಿಸಿದರು, ಗಣೇಶ ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು. ರಾಕೇಶ್ ರಾವ್ ಫಲಾನುಭವಿಗಳ ಪಟ್ಟಿ ಓದಿದರು. ಆದರ್ಶ ಯುವಕ ಸಂಘದ ಅಧ್ಯಕ್ಷ ಸಂತೋಷ ಜಿ.ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು.ಆದರ್ಶ ಯುವಕ ಸಂಘ ಹಾಗೂ ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
~~~~~
ಕಾಶೀ ಸಂತಾನ ಟ್ರಸ್ಟ್ ನಲ್ವತ್ತು ವರ್ಷಗಳಲ್ಲಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅರ್ಹತಾನುಸಾರ ವಿದ್ಯಾರ್ಥಿ ವೇತನ ವಿತರಿಸುತ್ತಿದೆ. ಸಹಾಯಧನವನ್ನು ಆರೋಗ್ಯ ಹಾಗೂ ಅಗತ್ಯವಿರುವ ಬಡವರಿಗೆ ಕೊಡುತ್ತಿದೆ. ಮುಂದಿನ ವರ್ಷದಿಂದ ಎರಡು ಲಕ್ಷ ರೂಪಾಯಿ ಮೊತ್ತವನ್ನು ವಿತರಿಸಲಾಗುವುದು.
ನಿವೃತ್ತ ಶಿಕ್ಷಕ ವೈ.ಎಂ.ಶ್ರೀಧರ ರಾವ್ ಕಾಶೀ ಸಂತಾನ ಟ್ರಸ್ಟ್ ನ ಸಂಸ್ಥಾಪಕರು. ಟ್ರಸ್ಟ್ ನ ಕಾರ್ಯಗಳನ್ನು ನಿಷ್ಠೆ ಹಾಗೂ ಶ್ರದ್ಧೆಯಿಂದ ನಿರ್ವಹಿಸುತ್ತಾ ಬಂದವರು. ಅರ್ಹ ವಿದ್ಯಾರ್ಥಿಗಳ ಮನೆ ಮನೆಗಳಿಗೆ ತೆರಳಿ ವಿದ್ಯಾರ್ಥಿವೇತನ ವಿತರಿಸುತ್ತಿದ್ದ ಶ್ರೀಧರ ರಾವ್ ಒಂದು ಮಾದರಿಯಾಗಿ ಟ್ರಸ್ಟನ್ನು ಬೆಳೆಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment