ಮಂಗಳೂರು: ಸ್ಥಳೀಯ ನಾಗರಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಇನ್ನು ಮುಂದೆ ಮಂಗಳೂರಿನಿಂದ ಬಂಟ್ವಾಳಕ್ಕೆ ಹೋಗಿಬರಲು ಸುತ್ತಿ ಬಳಸಿ ಸಂಚರಿಸುವ ಅನಿವಾರ್ಯತೆ ಇಲ್ಲ. ಜನರ ಹಣ, ಸಮಯ ಮತ್ತು ಶ್ರಮ ಇನ್ನು ಮುಂದೆ ಉಳಿತಾಯವಾಗುತ್ತದೆ. ನೂತನವಾಗಿ ನಿರ್ಮಾಣಗೊಂಡಿರುವ ಮೂಲರಪಟ್ಣ ಸೇತುವೆ ಜನಸಂಚಾರಕ್ಕೆ ಶುಕ್ರವಾರ ಮುಕ್ತವಾಯಿತು.
ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳನ್ನು ಸಂಪರ್ಕಿಸುವ ರೂ 13.90 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮೂಲರಪಟ್ಣ ನೂತನ ಸೇತುವೆಯನ್ನು ಊರಿನ ಹಿರಿಯರು ತೆಂಗಿನಕಾಯಿ ಒಡೆದು ಸಂಚಾರಕ್ಕೆ ಮುಕ್ತಗೊಳಿಸಿದರು.
ಮಂಗಳೂರು ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಹಾಗೂ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರು ಯಾವುದೇ ಉದ್ಘಾಟನೆ ಕಾರ್ಯಕ್ರಮ ಮಾಡದೇ ಸೇತುವೆಯಲ್ಲಿ ಊರಿನ ಪ್ರಮುಖರ ಜತೆ ಸಾಗಿ ಕಾಮಗಾರಿ ಪರಿಶೀಲಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಸೇತುವೆ ನಿರ್ಮಾಣ ಸಂಸ್ಥೆ ಕಾವೂರು ಮುಗ್ರೋಡಿ ಕನ್‌ಸ್ಟ್ರಕ್ಷನ್ಸ್ ಮಾಲಕ ಸುಧಾಕರ ಶೆಟ್ಟಿ ಮುಗ್ರೋಡಿ, ದಾಮೋದರ್, ಅರಳ ಗ್ರಾ.ಪಂ. ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ, ಉಪಾಧ್ಯಕ್ಷೆ ಪ್ರೇಮಾ, ಮುತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್ ಬೊಳ್ಳಾಜೆ, ಗಂಜಿಮಠ ಗ್ರಾ.ಪಂ. ಅಧ್ಯಕ್ಷ ನೋಣಯ್ಯ ಕೋಟ್ಯಾನ್, ತೆಂಕ ಎಡಪದವು ಗ್ರಾ.ಪಂ. ಅಧ್ಯಕ್ಷ ಸುಕುಮಾರ್ ದೇವಾಡಿಗ, ತಾ.ಪಂ. ಮಾಜಿ ಸದಸ್ಯ ನಾಗೇಶ್ ಶೆಟ್ಟಿ,
ಬಡಗಬೆಳ್ಳೂರು ಗ್ರಾ.ಪಂ. ಪ್ರಕಾಶ್ ಆಳ್ವ, ಸದಸ್ಯರಾದ ಪ್ರಸಾದ್ ಕುಮಾರ್, ಪ್ರವೀಣ್ ಗುಂಡ್ಯ, ತಾರಾನಾಥ್ ಕುಲಾಲ್, ಜಗದೀಶ್ ಪೂಜಾರಿ, ಪುಷ್ಪಾ ನಾಯ್ಕ್, ಮಾಲಾತಿ, ಪ್ರವೀಣ್ ಆಳ್ವ, ರುಕ್ಮಿಣಿ, ವನಿತಾ, ಶಶಿಕಲಾ, ತೋಮಸ್ ಲೋಬೊ, ಪುಷ್ಪಾ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಪ್ರಮುಖರಾದ ಪ್ರಸನ್ನ ಕುಮಾರ್ ಶೆಟ್ಟಿ, ನಳಿನಿ ನಾಯ್ಕ,ಸಂತೋಷ್ ರಾಯಿಬೆಟ್ಟು, ಎಂ.ಬಿ.ಆಶ್ರಫ್, ಸುದರ್ಶನ್ ಜೈನ್, ನಂದರಾಮ ರೈ, ಸುದರ್ಶನ್ ಬಜ, ಮಹಮ್ಮದ್ ಸಾಲಿ, ಗಣೇಶ್ ರೈ, ರಮಾನಾಥ ರಾಯಿ, ಸುಪ್ರೀತ್ ಆಳ್ವ, ಕಾರ್ತಿಕ್ ಬಳ್ಳಾಲ್, ಅಶ್ವತ್ ರಾವ್ ಬಾಳಿಕೆ, ಯಶೋಧರ ಕರ್ಬೆಟ್ಟು, ಉಮೇಶ್ ಡಿ.ಎಂ, ಉಮೇಶ್ ಅರಳ, ಜಗದೀಶ್ ಆಳ್ವ ಅರಳ ಮೊದಲಾದವರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق