ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುಜುಂಗಾವು ವಿದ್ಯಾಪೀಠದಲ್ಲಿ ಪ್ರಾರಂಭೋತ್ಸವ

ಮುಜುಂಗಾವು ವಿದ್ಯಾಪೀಠದಲ್ಲಿ ಪ್ರಾರಂಭೋತ್ಸವ



ಕುಂಬಳೆ: ಕೇರಳ ಸರಕಾರದ ಆದೇಶದಂತೆ ಇಂದು ಎಲ್ಲಾ ಶಾಲೆಗಳು ಪುನರಾರಂಭಗೊಂಡಿದ್ದು, ಮುಜುಂಗಾವು ವಿದ್ಯಾಪೀಠದಲ್ಲೂ ಪ್ರಾರಂಭೋತ್ಸವ ಆಚರಿಸಲಾಯಿತು. ಪ್ರತಿವರ್ಷ ಜೂನ್ ಒಂದರಂದು ಸ್ವಾಗತ ಭಾರತೀ ಕಾರ್ಯಕ್ರಮವು ನೆರವೇರುವಂತೆ ಈ ಬಾರಿ ನವಂಬರ್‌ನಲ್ಲಿ ನೆರವೇರಿತು. ಮಾಸ್ಕ್ ಧರಿಸುವಂತೆ ಆದೇಶಿಸಿ; ಮಕ್ಕಳನ್ನು ಸಭಾಂಗಣದಲ್ಲಿ ಸಾಕಷ್ಟು ಅಂತರದಲ್ಲಿ ಕುಳ್ಳಿರಿಸಲಾಯಿತು.


ಮಕ್ಕಳು, ಶಿಕ್ಷಕರೊಡಗೂಡಿ ಸಾಮೂಹಿಕ ಪ್ರಾರ್ಥನೆ ಬಳಿಕ ಶಿಕ್ಷಕರಾದ ಶ್ರೀಯುತ ಹರಿಪ್ರಸಾದ್ ವೇದಿಕೆಯಲ್ಲಿರುವ ಅತಿಥಿಗಳನ್ನು ಹಾಗೂ ಮಕ್ಕಳನ್ನು ಸ್ವಾಗತಿಸಿದರು. ಅಭ್ಯಾಗತರಾಗಿ ಮುಜುಂಗಾವು ವಿದ್ಯಾಪೀಠದ ಪರಿಸರದ ಪಂಚಾಯತು ವಾರ್ಡ್ ಸದಸ್ಯೆ ಶ್ರೀಮತಿ ಪ್ರೇಮಲತಾ ಆಗಮಿಸಿದ್ದರು. "ಈ ವಿದ್ಯಾಪೀಠವು ಮಕ್ಕಳ ದೇವಾಲಯದಂತೆ ಭಾಸವಾಗುತ್ತಿದೆ. ಸಂಸ್ಕೃತಿ, ಸಂಸ್ಕಾರಗಳಿಂದೊಡಗೂಡಿದ ವಿದ್ಯೆ ಅವರ ಬಾಳಿಗೆ ದಾರಿದೀಪವಾಗಲಿ" ಎಂದು ಶುಭ ಹಾರೈಸಿದರು.


ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಆಚಾರ್ಯ, ಆಡಳಿತ ಮಂಡಳಿ ಅಧ್ಯಕ್ಷ ಎಸ್. ಎನ್ ರಾವ್ ಮುನ್ನಿಪ್ಪಾಡಿ, ಆಡಳಿತಾಧಿಕಾರಿಗಳಾದ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾ ಸರಸ್ವತಿ ಇವರುಗಳು ಮಕ್ಕಳಿಗೆ ಶುಭ ಕೋರಿದರು. ತದನಂತರ ಮಕ್ಕಳಿಗೆ ಸಿಹಿ ಹಂಚಲಾಯಿತು.


ವರದಿ:- ವಿಜಯಾಸುಬ್ರಹ್ಮಣ್ಯ, ಶಾಲಾ ಗ್ರಂಥಪಾಲಕಿ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post