ಕುಂಬಳೆ: "ಮಾನವರನ್ನು ಹೆತ್ತತಾಯೋಪಾದಿಯಲ್ಲಿ ಸಲಹುವ ಗೋವಿಗೂ ಪೂಜೆ ಸಲ್ಲಬೇಕು. ದೇವರಪೂಜೆ ಮಾಡುವಂತೆಯೆ ನಾವು ದಿನನಿತ್ಯಲೂ ಗೋಪೂಜೆಯನ್ನು ಮಾಡುತ್ತಾಬರಬೇಕು.ದೀಪಾವಳಿ ಸಂದರ್ಭದಲ್ಲಂತೂ ಗೋವನ್ನು ವಿಶೇಷವಾಗಿ ಪೂಜಿಸಬೇಕು". ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಪ್ರತೀ ದೀಪಾವಳಿಗೂ ಶಿಷ್ಯ ಕೋಟಿಗೆ ನೆನಪಿಸುವ ಮಾತಿದು.
ಅಂತೆಯೇ ಶ್ರೀಗಳವರ ನಿರ್ದೇಶಾನುಸಾರ ಮುನ್ನಡೆಯುತ್ತಿರುವ; ಮುಜುಂಗಾವಿನ ಶ್ರೀಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ (ನ.5) ವಿದ್ಯಾಪೀಠದ ಮಕ್ಕಳ ಹಾಗೂ ಶಿಕ್ಷಕರ ಸಮಕ್ಷಮದಲ್ಲಿ ಗೋಪೂಜಾ ಕಾರ್ಯಕ್ರಮ ನೆರವೇರಿತು.
ಶಾಲಾ ಆಡಳಿತ ಸೇವಾಸಮಿತಿ ಅಧ್ಯಕ್ಷರಾದ ಎಸ್.ಎನ್.ರಾವ್ ಮುನ್ನಿಪ್ಪಾಡಿಯವರು ದೀಪಬೆಳಗಿ ಗೋ ಆರತಿ, ಗೋಗ್ರಾಸದೊಂದಿಗೆ ಪೂಜೆ ಸಲ್ಲಿಸಿದರು.
ಆ ನಂತರ ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ, ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ, ಕಂಪ್ಯೂಟರ್ ಶಿಕ್ಷಕಿ ಶಿವಕುಮಾರಿ ಕುಂಚಿನಡ್ಕ ಹಾಗೂ ಶಾಲೆಯ ಶಿಕ್ಷಕವರ್ಗದವರೂ ಶಾಲಾ ಮಕ್ಕಳೂ ಗೋಗ್ರಾಸ ನೀಡಿ ಗೋ ಪೂಜೆ ಸಲ್ಲಿಸಿದರು.
ವರದಿ: ವಿಜಯಾಸುಬ್ರಹ್ಮಣ್ಯ,
ಗ್ರಂಥಪಾಲಿಕೆ. ಮುಜುಂಗಾವು ವಿದ್ಯಾಪೀಠ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment