ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು; ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಕಾರು, ಇಬ್ಬರು ಗಂಭೀರ

ಮಂಗಳೂರು; ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಕಾರು, ಇಬ್ಬರು ಗಂಭೀರ

 


ಮಂಗಳೂರು: ನಗರದ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣ (ಪಡೀಲ್‌) ಬಳಿಯ ಫ‌ುಟ್‌ಪಾತ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಗುರುವಾರ ಬೆಳಗ್ಗಿನ ವೇಳೆ ಕಾರು ಚಲಿಸಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಧ್ಯಪ್ರದೇಶದ ಅಮರ್‌ಪುರ ನಿವಾಸಿಗಳಾದ ಕಲ್ಯಾಣ್‌ ಸಿಂಗ್‌ (50) ಮತ್ತು ಪಟೇಲಾಲ್‌ (40) ಗಾಯಗೊಂಡವರು. ಅವರನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರನ್ನು ಚಲಾಯಿಸಿದ್ದ ಮಂಜುನಾಥ್‌ ಯಾನೆ ಚಿದಾನಂದನನ್ನು ಬಂಧಿಸಲಾಗಿದೆ. ಹೊರ ರಾಜ್ಯದ ಸುಮಾರು 10ಕ್ಕೂ ಅಧಿಕ ಕಾರ್ಮಿಕರು ರೈಲು ನಿಲ್ದಾಣ ಸಮೀಪದ ಫ‌ುಟ್‌ಪಾತ್‌ನಲ್ಲಿ ಮಲಗಿದ್ದರು.

ಬೆಳಗ್ಗಿನ ಸಮಯದಲ್ಲಿ ಸುಮಾರು 3 ಗಂಟೆಯ ವೇಳೆಗೆ ಅವಘಡ ಸಂಭವಿಸಿದೆ.

ಆರೋಪಿ ಮಂಜುನಾಥ್‌ ವೃತ್ತಿಯಲ್ಲಿ ರಿಕ್ಷಾ ಚಾಲಕ. ಜೊತೆಗೆ ರೈಲು ನಿಲ್ದಾಣದಲ್ಲಿ ಪಾರ್ಸೆಲ್‌ಗ‌ಳನ್ನು ಸಾಗಿಸುವ ಕೆಲಸ ಮಾಡುತ್ತಿದ್ದು, ಅಲ್ಲೇ ಪಾರ್ಕ್‌ ಮಾಡಲಾಗಿದ್ದ ಪಾರ್ಸೆಲ್‌ ಸಾಗಿಸುವ ಕಾರು ಚಲಾಯಿಸಿದ್ದು, ಅದು ನಿಯಂತ್ರಣ ತಪ್ಪಿ ಫ‌ುಟ್‌ಪಾತ್‌ನಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರ ಮೇಲೆ ಚಲಿಸಿತು.

ಈ ವೇಳೆ ಅಲ್ಲಿದ್ದ ಹಲವು ಕಾರ್ಮಿಕರು ನಿದ್ದೆಯಲ್ಲಿದ್ದರು. ಅಲ್ಲದೇ ಕಾರಿನ ನಿಜವಾದ ಚಾಲಕ ಕಾರಿನಲ್ಲಿಯೇ ಮಲಗಿದ್ದ. ಈ ಬಗ್ಗೆ ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


0 تعليقات

إرسال تعليق

Post a Comment (0)

أحدث أقدم