ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗ್ಯಾಸ್ ಸಿಲಿಂಡರ್ ಸ್ಫೋಟ; 7 ಮಂದಿಗೆ ಗಾಯ

ಗ್ಯಾಸ್ ಸಿಲಿಂಡರ್ ಸ್ಫೋಟ; 7 ಮಂದಿಗೆ ಗಾಯ

 


ಬೆಂಗಳೂರು:  ಆನೇಕಲ್ ತಾಲೂಕಿನ ಜಿಗಣಿಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಗೊಂಡ ಪರಿಣಾಮ, ಮನೆಯಲ್ಲಿದ್ದಂತ 7 ಜನರು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.


ಆನೇಕಲ್ ತಾಲೂಕಿನ ಜಿಗಣಿಯ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಮಂಜುನಾಥ್ ರೆಡ್ಡಿ ಎಂಬವರಿಗೆ ಸೇರಿದ ಮನೆಯೊಂದರಲ್ಲಿ, ಉತ್ತರ ಭಾರತ ಮೂಲಕ ಏಳು ಕಾರ್ಮಿಕರು 2 ವರ್ಷಗಳಿಂದ ಬಾಡಿಗೆ ಇದ್ದರು. ಈ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬ್ಲಾಸ್ ಆಗಿದೆ.


ಈ ಘಟನೆ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ನಡೆದಿದ್ದು, ಸಿಲಿಂಡರ್ ಬ್ಲಾಸ್ಟ್ ನಿಂದಾಗಿ ಮನೆ ಕೂಡ ಹೊತ್ತಿ ಉರಿದಿದೆ.

ಈ ಘಟನೆಯಲ್ಲಿ ಕಾರ್ಮಿಕರಾದ ಜಗದೀಶ್, ಶಾಂತಿಬೈ, ಪ್ರಕಾಶ್, ಜೈಮುಲ್, ಮಂಜು ಹಾಗೂ ವಲ್ಲಿ ಎಂಬಂತ 7 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಜಿಗಣಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

0 Comments

Post a Comment

Post a Comment (0)

Previous Post Next Post