ಹುಟ್ಟಿದ ಪ್ರತಿ ಮಗುವಿನಲ್ಲೂ ಒಂದಲ್ಲ ಒಂದು ಕಲೆ ಇದ್ದೇ ಇರುತ್ತದೆ. ಅದೇ ರೀತಿ ಕಲೆಯನ್ನು ಮುಂದುವರಿಸುತ್ತಾ ಹೋದಾಗ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಬ್ಬರಿಗಿಂತ ಒಬ್ಬರು ವಿಭಿನ್ನ ಶೈಲಿಯ ಕಲೆಯಲ್ಲಿ ತೊಡಗಿರುವುದು ಸಾಮಾನ್ಯವಾಗಿ ನಾವು ಎಷ್ಟೋ ಜನರನ್ನು ಕಾಣಬಹುದು. ಅಂಥವರ ಸಾಲಿನಲ್ಲಿ ಸುಜೀತ್ ಕೂಡ ಒಬ್ಬರು. ಹುಟ್ಟಿದ್ದು 17/6/2006 ರಲ್ಲಿ ಇವರು ಶಾಂತಿನಗರ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಅದೇ ರೀತಿ ಶಾಲೆಯಲ್ಲಿ ನಡೆಯುತ್ತಿದ್ದ ಚಿತ್ರಕಲೆ ಸ್ಪರ್ಧೆಯಲ್ಲೂ ಭಾಗವಹಿಸಿ ಬಹುಮಾನವನ್ನು ತನ್ನದಾಗಿಸಿಕೊಳ್ಳುತ್ತಿದ್ದರು. ಆ ನಂತರ ಅವರಿಗೆ ಚಿತ್ರ ಬಿಡಿಸಬಹುದು ಎನ್ನುವ ಧೈರ್ಯ ಹೆಚ್ಚಾಗ ತೊಡಗಿತು. ಹಾಗೆಯೇ ಮಂಡ್ಯ ಸಂಸ್ಥೆ ಆಯೋಜಿಸಿದ ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೇ ಸ್ಥಾನ ಗಳಿಸಿ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ಪಡೆದುಕೊಂಡರು.
ಈವರೆಗೆ ಸುಮಾರು 250ಕ್ಕೂ ಹೆಚ್ಚಿನ ಚಿತ್ರವನ್ನು ಬಿಡಿಸಿದ ಹೆಮ್ಮೆ ಇವರಿಗಿದೆ. ಹಾಗೂ 50 ಕ್ಕೂ ಹೆಚ್ಚಿನ ಲೀಫ್ ಆರ್ಟ್ , ಪೆನ್ಸಿಲ್ ಲೆಡ್ ಮೂಲಕ ಹಾಗು ಸೋಪಿನಲ್ಲಿ ಕೂಡ ಚಿತ್ರವನ್ನು ಬಿಡಿಸಿದ್ದಾರೆ.
ಲಾಕ್ ಡೌನ್ ವೇಳೆಯಲ್ಲಿ ಅಶ್ವತ್ಥ ಎಲೆಯಲ್ಲಿ ಚಿತ್ರ ಬಿಡಿಸುವ ಕಲೆಯನ್ನು ಬೆಳೆಸಿಕೊಂಡ ಸುಜೀತ್ ಅವರು ಹಲವಾರು ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ಯಮಿಗಳಿಗೆ ಚಿತ್ರವನ್ನು ಬಿಡಿಸಿ ಕೊಟ್ಟಿದ್ದಾರೆ.
ಹಾಗೆ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಯವರಿಗೆ ಅವರ ಪತ್ನಿಗೆ ಲೀಫ್ ಆರ್ಟ್ ಲ್ಲಿ ಬಿಡಿಸಿದನ್ನು ಅವರಿಗೆ ಅರ್ಪಿಸಿದ್ದಾರೆ. ಇದೊಂದು ಅವರಿಗೆ ಸುಂದರ ಕ್ಷಣ.
ಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿ, ಪ್ರತಿಭಾ ಪುರಸ್ಕಾರಗಳಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದರು.
ಸಂಘಸಂಸ್ಥೆಗಳ ಊರಿನ ಗಣ್ಯರು ಪ್ರತಿನಿಧಿಗಳಿಗೆ ಇವರು ಮಾಡಿದ ಚಿತ್ರವನ್ನು ನೀಡಿ ಹತ್ತು ಹಲವು ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಇವರ ಇಂತಹ ಕಲೆಗೆ ಇನ್ನಷ್ಟು ಬಹುಮಾನ ದೊರಕಲಿ. ಹೆತ್ತವರಿಗೂ ಊರಿಗೂ ಕೀರ್ತಿ ತಂದು ಕೊಡಲಿ.
-ಹರ್ಷಿತಾ ಹರೀಶ್ ಕುಲಾಲ್
إرسال تعليق