ಭಾರತ ಸರ್ಕಾರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ ದಿನಾಂಕ: 19/11/2021ರಂದು ನಡೆಯಲಿದೆ
ಪ್ರತಿ ವರ್ಷ ಭಾರತದ ಗಣತಂತ್ರ ದಿವಸದ ಪ್ರಯುಕ್ತ ಹಾಗೂ “ಸಂವಿಧಾನ ದಿವಸ” ವನ್ನು ಆಚರಿಸುವ ಸಲುವಾಗಿ “ದೇಶಭಕ್ತಿ ಮತ್ತು ರಾಷ್ಟ್ರದ ನಿರ್ಮಾಣದಲ್ಲಿ ಯುವಜನರು” ಕುರಿತ ಇಂಗ್ಲೀಷ್/ಹಿಂದಿ ಭಾಷೆಯ ಭಾಷಣಸ್ಪರ್ಧೆಯನ್ನು ನೆಹರು ಯುವ ಕೇಂದ್ರ ತಾಲೂಕು, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಆಯೋಜಿಸಿತ್ತು.
ನಮ್ಮ ಜಿಲ್ಲೆಯ ಯುವಕ/ಯುವತಿಯರಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು, ನೆಹರು ಯುವ ಕೇಂದ್ರ ಸಂಘಟನೆ ಪ್ರತಿ ವರ್ಷದಂತೆ ಈ ವರ್ಷವು ಕೂಡ ಈ ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿದ್ದು “ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು” ಕುರಿತ ಭಾಷಣಸ್ಪರ್ಧೆಯನ್ನು ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಯೋಜಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದ್ದು, ಈ ಸ್ಪರ್ಧೆಗಳನ್ನು ಸಂಘಟಿಸುವ ಜವಾಬ್ದಾರಿಯನ್ನು ದೇಶದ ಎಲ್ಲಾ 623 ಜಿಲ್ಲಾ ಮಟ್ಟದ ನೆಹರು ಯುವ ಕೇಂದ್ರಗಳಿಗೆ ವಹಿಸಿಕೊಟ್ಟಿದೆ.
ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಹರು ಯುವ ಕೇಂದ್ರ, ತಾಲೂಕು, ಹಾಗೂ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಿದ್ದು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಜೇತರುಗಳಿಗೆ ಆಕರ್ಷಕ ಬಹುಮಾನಗಳನ್ನು ಭಾರತ ಸರ್ಕಾರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೀಡಲಿದ್ದು ಅವುಗಳ ವಿವರಗಳು ಇಂತಿವೆ.
ಪ್ರಥಮ ಬಹುಮಾನ ದ್ವಿತೀಯ ಬಹುಮಾನ ತೃತೀಯ ಬಹುಮಾನ
ತಾಲೂಕು ಮಟ್ಟ (ಆಯ್ಕೆ) ಪ್ರಶಸ್ತಿ ಪತ್ರ
ಜಿಲ್ಲಾ ಮಟ್ಟ 5,000=00 2,000=00 1,000=00
ರಾಜ್ಯ ಮಟ್ಟ 25,000=00 10,000=00 5,000=00
ರಾಷ್ಟ್ರ ಮಟ್ಟ 2,00,000=00 1,00,000=00 50,000=00
ಭಾಷಣದ ವಿಷಯ:
• ಇಂಗ್ಲಿಷ್:Patriotisms and nation building with the theme of ( Together we grow,together we prosper,together we build a strong and inclusive India)
• ಹಿಂದಿ: - "देशभक्ति और राष्ट्र निर्माण"-सबका साथ, सबका विकास, सबका विश्वास थीम के साथ (हम साथ-साथ बढ़ें, समृद्ध हों, हम सब मिलकर एक मजबूत और समावेशी भारत का निर्माण करें)
• ಭಾಷಣ ಸ್ಪರ್ಧೆಯ ಕಾಲಾವಕಾಶ: 9-10 ನಿಮಿಷಕ್ಕೆ ಮೀರಬಾರದು.
• ಹಿಂದಿ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ಮಾತ್ರ ಭಾಷಣ ಮಾಡಲು ಅವಕಾಶ.
ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯು ಈ ಕೆಳಕಂಡ ಕೇಂದ್ರಗಳಲ್ಲಿ ನಡೆಯುವುದು - ಸಂಪರ್ಕಿಸ ಬೇಕಾದ ವ್ಯಕ್ತಿ, ದಿನಾಂಕದ ಸ್ಥಳ, ಹಾಗೂ ಸಮಯ ವಿವರ :-
ದಿನಾಂಕ ಹಾಗೂ ವೇಳೆ ತಾಲೂಕು ಸ್ಪರ್ಧೆ ನಡೆಯುವ ಸ್ಥಳ: *ಸಂತ ಫಿಲೋಮಿನಾ ಕಾಲೇಜು ಪುತ್ತೂರು*
ಸಂಪರ್ಕಿಸಬೇಕಾದ ವ್ಯಕ್ತಿಯ ಹೆಸರು ದೂರವಾಣಿ ಸಂಖ್ಯೆ:
•ಗೌತಮ್ ರಾಜ್ ಕರಂಬಾರು
ತಾಲೂಕು ಸಂಯೋಜಕ
ನೆಹರು ಯುವ ಕೇಂದ್ರ ಮಂಗಳೂರು
PH: 8105138177
•ಪ್ರಜ್ಞಾ ಕುಲಾಲ್ ಕಾವು
ತಾಲೂಕು ಸಂಯೋಜಕಿ ನೆಹರು ಯುವ ಕೇಂದ್ರ
ಮಂಗಳೂರು
ಹೆಚ್ಚಿನ ಮಾಹಿತಿಗಾಗಿ :
•ಡಾ.ಚಂದ್ರಶೇಖರ್
Associate professor,
Department of physics,
ಸಂತಫಿಲೋಮಿನಾ ಕಾಲೇಜು, ಪುತ್ತೂರು
9743824251
ಈ ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಚಿಸುವ ಪ್ರತಿಭಾವಂತ ಅಭ್ಯರ್ಥಿಗಳು 18-29 ವಯೋಮಿತಿಯ ಯುವಜನರಾಗಿರಬೇಕು ಹಾಗೂ ಕಡ್ಡಾಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಾಗಿರಬೇಕು.
ಆಯಾ ತಾಲೂಕಿನ ಆಸಕ್ತರು ಯಾವುದೇ ವರ್ಗದ, ಉದ್ಯೋಗ ಅಥವಾ ಉದ್ಯೋಗದಲ್ಲಿರದ ಯುವಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧಳುಗಳು ತಮ್ಮ 01 ಪಾಸ್ ಪೋರ್ಟ ಸೈಜ್ ಪೋಟೊ, ಆಧಾರ್ ಕಾರ್ಡ್( ಕಡ್ಡಾಯವಾಗಿ) ಪ್ರತಿ, ಪ್ಯಾನ್ ಕಾರ್ಡ್/ ಶಾಲಾ ಕಾಲೇಜಿನಿಂದ ಅಥವಾ ಆಫೀಸ್/ಸಂಸ್ಥೆಗಳಿಂದ ಜಾರಿಯಾದ ಅಧಿಕೃತ ಫೋಟೊ ಇರುವ ಗುರುತಿನ ಚೀಟಿಯನ್ನು, ವಯೋಮಿತಿಯ ತಪಾಸಣೆಗಾಗಿ ಅಗತ್ಯವಾಗಿ ತರಲು ನಿರ್ದೇಶಿಸಲಾಗಿದೆ.
ಪಿಯು/ಪ್ರಥಮ ದರ್ಜೆ ಕಾಲೇಜು ಅಥವಾ ವಿದ್ಯಾ ಸಂಸ್ಥೆಗಳು ಮೊದಲು ತಮ್ಮ ತಮ್ಮ ಕಾಲೇಜುಗಳಲ್ಲಿ ಮೇಲ್ಕಂಡ ವಿಷಯದಲ್ಲಿ ಭಾಷಣ ಸ್ಪರ್ಧೆ ನಡೆಸಿ ವಿಜೇತರಾದ ಮೊದಲ 3 ಅಭ್ಯರ್ಥಿಗಳನ್ನು ತಾಲೂಕು ಮಟ್ಟದಲ್ಲಿ ಪಾಲ್ಗೊಳ್ಳಲು ಮೇಲ್ಕಂಡ ಕೇಂದ್ರಗಳಿಗೆ ಮೇಲೆ ತಿಳಿಸಲ್ಪಟ್ಟ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಕಳಿಸತಕ್ಕದ್ದು. ಆಯಾ ತಾಲೂಕಿನಿಂದ ಸ್ಪರ್ಧಿಸಲು ಇಚ್ಛಿಸುವ ಅಭ್ಯರ್ಥಿಗಳು ಮೇಲ್ಕಾಣಿಸಿದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಮೇಲಿನ ವಿಷಯವನ್ನು ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಸರಕಾರೇತರ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಕಟಿಸುವುದರೊಂದಿಗೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಸ್ಥಳೀಯ ಪ್ರಾಂಶುಪಾಲರಿಗೆ ನಿರ್ದೆಶಿಸುವಂತೆ ಈ ಮೂಲಕ ಕೃತಜ್ಞತಾಪೂರಕವಾಗಿ ಕೋರಲಾಗಿದೆ.
ರಘವೀರ್ ಸೂಟರ್ ಪೇಟೆ
ಜಿಲ್ಲಾ ಯುವ ಅಧಿಕಾರಿ, ನೆಹರು ಯುವ ಕೇಂದ್ರ ,
ಮಂಗಳೂರು
(9958325151)
Post a Comment