ಬೆಂಗಳೂರು; ಶತಕದತ್ತ ಹೆಜ್ಜೆ ಹಾಕಿದ ಟೊಮೆಟೊ ಬೆಲೆ ಇದೀಗ ಕೆಜಿಗೆ 40-50 ರೂ. ದರದಲ್ಲಿ ಇಳಿಕೆಯಾಗಿರುವುದು ಗ್ರಾಹಕರ ಮೊಗದಲ್ಲಿ ಸಂತಸ ತಂದಿದೆ. ಕೆಜಿಗೆ ನೂರು ರೂ. ತಲುಪುತ್ತಿದ್ದಂತೆ ಮಾರುಕಟ್ಟೆಗೆ ಭಾರಿ ಸಂಖ್ಯೆಯಲ್ಲಿ ಟೊಮೆಟೊ ಬರಲಾರಂಭಿಸಿತು.
ಇದರಿಂದ ದರ ಏಕಾಏಕಿ ಅರ್ಧದಷ್ಟು ಕುಸಿತ ಕಾಣಲು ಕಾರಣವಾಗಿದೆ. ಟೊಮೆಟೊ ದರ ಇಳಿಕೆಯಾದರೂ ಕೊತ್ತಂಬರಿ ಸೊಪ್ಪಿನ ದರ ಮಾತ್ರ ಇಳಿಕೆ ಕಂಡಿಲ್ಲ. ಕೊತ್ತಂಬರಿ ಸೊಪ್ಪು 114 ರೂ. ಇದ್ದರೆ ಪಾಲಾಕ್ ಸೊಪ್ಪು 107 ರೂ. ನಷ್ಟಿದೆ.
ಮಳೆ ಕಾರಣದಿಂದ ಸೊಪ್ಪಿನ ದರ ಏರಿಕೆಯಾಗಿದೆ. ಮುಂದಿನ ವಾರದೊಳಗೆ ಸೊಪ್ಪಿನ ದರ ಕೂಡ ಇಳಿಕೆಯಾಗಲಿದೆ.
Post a Comment