ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದು ದಂಪತಿಗಳು ಸಾವು

ನಿಯಂತ್ರಣ ತಪ್ಪಿ ಕಾರು ಕೆರೆಗೆ ಬಿದ್ದು ದಂಪತಿಗಳು ಸಾವು

 


ಕಾರವಾರ: ಸಂಬಂಧಿಕರೊಬ್ಬರು ಮೃತಪಟ್ಟ ಕಾರಣ ಅಂತ್ಯಕ್ರಿಯೆಗೆಂದು ಕರವಳ್ಳಿಯಲ್ಲಿಗೆ ಕಾರಿನಲ್ಲಿ ತೆರಳುತ್ತಿರುವ ವೇಳೆ ಕಾರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು ದಂಪತಿ ಸಾವನ್ನಿರುವ ಘಟನೆಯೊಂದು ವರದಿಯಾಗಿದೆ.

ನಿವೃತ್ತ ಯೋಧರೊಬ್ಬರು ಪತ್ನಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ  ಕೆರೆಗೆ ಬಿದ್ದು, ದಂಪತಿ ನೀರಲ್ಲಿ ಮುಳುಗಿ ಧಾರುಣವಾಗಿ ಸಾವನ್ನಪ್ಪಿದ್ದಾರೆ.


ಸಿಆರ್ ಪಿ ಎಫ್ ಯೋಧರಾಗಿ ನಿವೃತ್ತರಾಗಿದ್ದ ರಾಜು ವರ್ಗೀಸ್ ಹಾಗೂ ಅವರ ಪತ್ನಿ ಬ್ಲೆಸ್ಸಿ ಮೃತಪಟ್ಟಿರುವ ದಂಪತಿ.

ಇವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಮೂಲತಃ ಇವರು ಮುಂಡಗೋಡ ತಾಲೂಕಿನ ಅರಶಣಗೇರಿಯವರಾಗಿದ್ದಾರೆ.

ಅವರ ಸಂಬಂಧಿಕರೊಬ್ಬರು ತೀರಿಕೊಂಡ ಕಾರಣ, ಕರವಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಮುಂಡಗೋಡದ ಅಮ್ಮಾಜಿ ಕೆರೆಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡು ಕೆರೆಗೆ ಉರುಳಿ ಬಿದ್ದಿದೆ.


ಘಟನೆ ನಡೆದ ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಾರು ಉಲ್ಟಾ ತಿರುಗಿ ಬಿದ್ದ ಕಾರಣ ಬಾಗಿಲು ತೆಗೆಯಲಾಗದೇ ನೀರಲ್ಲಿ ಮುಳುಗಿ ರಾಜು ವರ್ಗೀಸ್ ಹಾಗೂ ಬೆಸ್ಲಿ ದಂಪತಿಗಳು ಮೃತಪಟ್ಟಿದ್ದಾರೆ.

ಆಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮೃತದೇಹಗಳನ್ನು ಹೊರತೆಗೆದಿದ್ದಾರೆ.


0 Comments

Post a Comment

Post a Comment (0)

Previous Post Next Post