ಮಂಗಳೂರು: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ದಕ್ಷಿಣ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಡಿಸೆಂಬರ್ ತಿಂಗಳಲ್ಲಿ ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ ಪರಿಕಲ್ಪನೆಯಡಿ ಆಯೋಜಿಸುತ್ತಿರುವ 8ನೇ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ಕಲಾ ವೈವಿಧ್ಯದ ಅಂಗವಾಗಿ 'ನಾಲ್ಕು ಸಾಲುಗಳ ಚುಟುಕುಗಳ ಸಾಮರ್ಥ್ಯ ಮತ್ತು ಕಾವ್ಯ ಲೋಕದ ಸಾಂಗತ್ಯ' ಎಂಬ ವಿಷಯದಲ್ಲಿ ರಾಜ್ಯಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.
ಪ್ರಥಮ 5000 ರೂಪಾಯಿಗಳು ಹಾಗೂ ದ್ವಿತೀಯ 3000 ರೂಪಾಯಿಗಳ ನಗದು ಬಹುಮಾನವಿರುವ ಈ ಸ್ಪರ್ಧೆಗೆ ಆಸಕ್ತ ಲೇಖಕರು ಬಿಳಿ ಹಾಳೆಯ ಹತ್ತು ಪುಟಗಳಿಗೆ ಮೀರದಂತೆ ಅಥವಾ ಎರಡು ಸಾವಿರ ಪದಗಳ ಮಿತಿಯೊಳಗೆ ಬರೆದಿರುವ ತಮ್ಮ ಸ್ವಂತಿಕೆಯ ಅಧ್ಯಯನಶೀಲ ಪ್ರಬಂಧಗಳನ್ನು ಅಧ್ಯಕ್ಷರು, ಚುಟುಕು ಸಾಹಿತ್ಯ ಸಮ್ಮೇಳನ ಸಮಿತಿ, 107, ಶಿವಪ್ರಸಾದ್ ಗೋಲ್ಡ್ ಅಪಾರ್ಟ್ಮೆಂಟ್, ಲ್ಯಾಂಡ್ ಲಿಂಕ್ಸ್ ಮುಖ್ಯರಸ್ತೆ, ಕೊಂಚಾಡಿ, ಮಂಗಳೂರು 575008 ವಿಳಾಸಕ್ಕೆ ನವಂಬರ್ 27 ರೊಳಗೆ ತಲುಪುವಂತೆ ಸಾಮಾನ್ಯ ಅಂಚೆಯಲ್ಲಿ ಕಳಿಸಿಕೊಡಬಹುದು. ಹೆಚ್ಚಿನ ಮಾಹಿತಿಗೆ 8310388415 ಸಂಖ್ಯೆಗೆ ಸಂಪರ್ಕಿಸಲು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق