ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಕ್ಕಳ ದಿನಾಚರಣೆಯ ಪ್ರಯುಕ್ತ ಭಕ್ತಿಗೀತೆ ಸಂಗೀತ ಸ್ಪರ್ಧಾ ಕಾರ್ಯಕ್ರಮ

ಮಕ್ಕಳ ದಿನಾಚರಣೆಯ ಪ್ರಯುಕ್ತ ಭಕ್ತಿಗೀತೆ ಸಂಗೀತ ಸ್ಪರ್ಧಾ ಕಾರ್ಯಕ್ರಮ

 



ಸುಳ್ಯ; ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ದಿನಾಂಕ 14-11-2021 ರಂದು  ಮಕ್ಕಳ ದಿನಾಚರಣೆಯ ಪ್ರಯುಕ್ತ  ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಮಕ್ಕಳಿಗಾಗಿ ಭಕ್ತಿಗೀತೆ ಸಂಗೀತ ಸ್ಪರ್ಧೆಯು ಜರುಗಿತು .


  ಕಾರ್ಯಕ್ರಮವನ್ನು ಸುಳ್ಯದ ತಹಸೀಲ್ದಾರ್ ರಾದ  ಕು| ಅನಿತಾ ಲಕ್ಷ್ಮಿ  ರವರು ಉದ್ಘಾಟಿಸಿದರು. ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರು ಮತ್ತು ಖ್ಯಾತ ಜ್ಯೋತಿಷಿಗಳಾದ ಎಚ್ .ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು. 


ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಧಾನ  ಸಂಚಾಲಕರಾದ ರಾಜಯೋಗಿನಿ ಉಮಾದೇವಿ ರವರು ದಿವ್ಯ ಸಾನಿಧ್ಯ ವಹಿಸಿದ್ದರು. 


ಸುಳ್ಯದ ಸರ್ಕಲ್ ಇನ್ ಸ್ಪೆಕ್ಟರ್ ಶ್ರೀ ನವೀನ ಚಂದ್ರ ಜೋಗಿ ರವರು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಿದರು. 


ತಾಂತ್ರಿಕ ಕೃಷಿ ಅಧಿಕಾರಿಗಳಾದ ಶ್ರೀ ಮೋಹನ್ ನಂಗಾರು ರವರು ವೇದಿಕೆಯಲ್ಲಿದ್ದ  ಗಣ್ಯರನ್ನು ಸನ್ಮಾನಿಸಿ ಶುಭ ಹಾರೈಸಿದರು.  


ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಹ ಸಂಚಾಲಕರಾದ ಉಮೇಶ್ ಆಚಾರ್ಯ ಜಟ್ಟಿಪಳ್ಳ ರವರು ಮುಖ್ಯ ಅತಿಥಿಗಳಾಗಿದ್ದರು. 


ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಗಾಯಕ ಮತ್ತು ನಿರ್ದೇಶಕರಾದ ಪ್ರವೀಣ್ ಜಯ ವಿಟ್ಲ ಅವರಿಗೆ ಸಂಗೀತ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.  


ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ದಿಯಾ ರಾವ್ ಮಂಗಳೂರು ಮತ್ತು ಅಸ್ಮಿತ್ ಎ ಜೆ ಮಂಗಳೂರು ಹಾಗೂ ಹರ್ಷಿತಾ ಕೆ ಎಸ್ ಸುಳ್ಯ ಅವರಿಗೆ ಬಹುಮಾನದ ಪ್ರಶಸ್ತಿ ಪತ್ರ ಮತ್ತು ಟ್ರೋಫಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. 


ಸ್ಪರ್ಧೆಯಲ್ಲಿ ಪೂಜಾಶ್ರೀ ಬಳ್ಳಡ್ಕ , ಪಲ್ಲವಿ ಆಲೆಟ್ಟಿ , ವಿಶ್ವದೀಪ್ ಕುಂದಲ್ಪಾಡಿ , ರಿತಿಕಾ ರಮೇಶ್ ಪಿಲಿಕೋಡಿ , ಮೌಲ್ಯ ಮಜಿಕ್ಕೋಡಿ  , ಆಶಾ ರಮೇಶ್ , ಯಜೀಶ್ ಕಡಂಬಾರ್ , ಬಬಿತಾ  ಕಡಂಬಾರ್ , ಸ್ನಿಗ್ಧ ಎನ್ ಎಸ್ ಸುಳ್ಯ , ಗ್ರೀಷ್ಮಾ ಪೆರ್ಲಂಪಾಡಿ , ಅವನಿ ಎಮ್ ಎಸ್ ಸುಳ್ಯ , ಸನತ್ ಐವರ್ನಾಡು , ಇಶಾರ  ಆಲೆಟ್ಟಿ , ಅಶ್ವಿಜ್ ಆತ್ರೇಯ ಸುಳ್ಯ , ತೇಜಸ್ ವಿಟ್ಲ ಮತ್ತು ಪೂರ್ಣಿಮಾ ಪೆರ್ಲಂಪಾಡಿ ಭಾಗವಹಿಸಿದ್ದರು. 


ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಹರಿಪ್ರಸಾದ್ ಪಿ ಸುಳ್ಯ ರವರು ಪ್ರಾರ್ಥನೆ ಹಾಡಿದರು. 


ಸುಮಂಗಲ ಲಕ್ಷ್ಮಣ ಕೋಳಿವಾಡ ರವರು ವಂದನೆ ಸಲ್ಲಿಸಿದರು .

0 Comments

Post a Comment

Post a Comment (0)

Previous Post Next Post