ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ, ಅವರು ಇಂದು ನಿಧನರಾಗಿದ್ದಾರೆ.
ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ (81 ವರ್ಷ) ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರುದ್ರಪ್ಪ ಅವರು, ಇಂದು ಬೆಳಿಗ್ಗೆ 7.30ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಕಳೆದ ಜುಲೈನಲ್ಲಿ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ನಿಧನರಾಗಿದ್ದರು. ಅವರ ಬಳಿಕ, ಇಂದು ಅವರ ತಂದೆ ರುದ್ರಪ್ಪ ವಿಧಿವಶರಾಗಿದ್ದಾರೆ.
Post a Comment