ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪೆಟ್ರೋಲಿಯಂ ಡಿಸೇಲ್ ದರ ಇಳಿಕೆ

ಪೆಟ್ರೋಲಿಯಂ ಡಿಸೇಲ್ ದರ ಇಳಿಕೆ

 


ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ದರ 10 ರೂ. ಹಾಗೂ ಡೀಸಲ್ ದರವನ್ನು 5 ರೂಪಾಯಿ ಕಡಿಮೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರವು ತೈಲ ಬೆಲೆ ಕಡಿಮೆ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ಧಾರ ಪ್ರಕಟಿಸಿದ್ದರು.


ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಬಕಾರಿ ತೆರಿಗೆಯ ಜೊತೆಯಲ್ಲಿ ರಾಜ್ಯ ಸರ್ಕಾರವು ಮಾರಾಟ ತೆರಿಗೆಯನ್ನು ಶೇಕಡಾ 35 ರಿಂದ ಶೇಕಡಾ 25.9ಕ್ಕೆ ಮತ್ತು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 24 ರಿಂದ ಶೇಕಡಾ 14.34ಕ್ಕೆ ಇಳಿಸಿವೆ.

ಇದರಿಂದ ನ.3ರಂದು ಇದ್ದ ಪೆಟ್ರೋಲಿನ ಚಿಲ್ಲರೆ ಮಾರಾಟ ದರವು 113.93 ರೂಪಾಯಿಯಿಂದ 100.63 ರೂಪಾಯಿಗೆ ಬಂದಿದ್ದು, ಒಟ್ಟಾರೆ ದರ ಕಡಿತ 13.30 ರೂಪಾಯಿ ಆಗಲಿದೆ.

ಇನ್ನು ನ.3 ರಂದು ಇದ್ದ ಡೀಸೆಲ್​​​ ನ ಚಿಲ್ಲರೆ ಮಾರಾಟ ದರವು 104.50 ರೂಪಾಯಿಯಿಂದ 85.03 ರೂಪಾಯಿಗೆ ಇಳಿಕೆ ಆಗಲಿದೆ. ಒಟ್ಟಾರೆ 19.47 ರೂಪಾಯಿ ದರ ಕಡಿತ ಆಗಿದೆ.


0 تعليقات

إرسال تعليق

Post a Comment (0)

أحدث أقدم