ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೃಹಿಣಿಗೆ ನಿದ್ದೆ ಮಾತ್ರೆ ನೀಡಿ ಅತ್ಯಾಚಾರ; ಆರೋಪಿ ಬಂಧನ

ಗೃಹಿಣಿಗೆ ನಿದ್ದೆ ಮಾತ್ರೆ ನೀಡಿ ಅತ್ಯಾಚಾರ; ಆರೋಪಿ ಬಂಧನ



 ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಗೃಹಿಣಿಯೊಬ್ಬಳಿಗೆ ನಿದ್ದೆ ಮಾತ್ರೆ ನೀಡಿ ಅತ್ಯಾಚಾರ ಮಾಡಿದ ಘಟನೆಯೊಂದು ನಡೆದಿದೆ. ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಹೇಶ, ಅತ್ಯಾಚಾರಕ್ಕೆ ಒಳಗಾದ ಗೃಹಿಣಿ ಹಿರೇಬೆಣಕಲ್ ಸಮೀಪದ ಇಟ್ಟಿಗೆ ಬಟ್ಟಿಯಲ್ಲಿ ಮಹಿಳೆ ಕೆಲವು ತಿಂಗಳಿಂದ ಕೆಲಸ ಮಾಡುತ್ತಿದ್ದಳು.

ಇಟ್ಟಿಗೆ ಬಟ್ಟಿ ಮಾಲೀಕನಾಗಿರುವ ಮಹೇಶ ಗೃಹಿಣಿಗೆ ಬೆಳಗಿನ ಜಾವ ಕೆಲಸಕ್ಕೆ ಬರುವಂತೆ ಹೇಳಿದ್ದಾನೆ. ಆಗ ಚಹಾದಲ್ಲಿ ನಿದ್ದೆ ಮಾತ್ರೆ ಹಾಕಿ ಕೊಟ್ಟು ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

0 Comments

Post a Comment

Post a Comment (0)

Previous Post Next Post