ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಮಾಜಕ್ಕೆ ಮಾದರಿಯಾದ ಮಂಗಳೂರು ವಿ.ವಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕ

ಸಮಾಜಕ್ಕೆ ಮಾದರಿಯಾದ ಮಂಗಳೂರು ವಿ.ವಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕ

ಒಂದು ಬ್ಯಾಚ್ ನ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನಕ್ಕಾಗಿ ಕಾಲೇಜು ಬಿಡುವಾಗ ಮೋಜು ಮಸ್ತಿಯೊಂದಿಗೆ ಅನೇಕ ರೀತಿಯ ಬೀಳ್ಕೊಡುಗೆ ಸಮಾರಂಭ ವನ್ನು ಆಚರಿಸುತ್ತಾರೆ.

ಆದರೆ ಅ.ಭಾ.ವಿ.ಪ ಮಂಗಳೂರು ವಿ.ವಿ ಘಟಕದ ವಿದ್ಯಾರ್ಥಿ ಹಿರಿಯ ಕಾರ್ಯಕರ್ತರ ಬೀಳ್ಕೊಡುಗೆಯ ನೆನಪಿನಲ್ಲಿ ಸಮೀಪದ ಕೊಣಾಜೆ ಪದವು ಶಾಲೆಗೆ ಪುಸ್ತಕಗಳನ್ನು ಹಂಚಿ - ಗಿಡಗಳನ್ನು ನೆಟ್ಟು ಅರ್ಥಪೂರ್ಣ ವಾಗಿ ಆಚರಿಸಿದರು.




ಮಂಗಳೂರು: ವಿಶ್ವವಿದ್ಯಾನಿಲಯ ದತ್ತು ಪಡೆದಿರುವ ಸರ್ಕಾರಿ ಪ್ರೌಢಶಾಲೆ ಕೊಣಾಜೆಪದವು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆಪದವು ಇಲ್ಲಿ ವಿದ್ಯಾರ್ಥಿಗಳಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ಗೌರವಾನ್ವಿತ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಗಿಡ ನೆಡುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.


ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ಪ್ರಮುಖರಾದ ಲೋಕೇಶ್ ಜೋಡುಕಲ್ಲು ಮಾತನಾಡಿ ನಾವು ದೇಶ ಕಟ್ಟುವವರು ಆಗಬೇಕು, ಸ್ವಾಮಿ ವಿವೇಕಾನಂದರಂತಹ ಧ್ಯೇಯ ವ್ಯಕ್ತಿತ್ವವನ್ನು ಹೊಂದಬೇಕು, ನಮ್ಮ ಕಣಕಣದಲ್ಲೂ ದೇಶಭಕ್ತಿಯ ಜ್ವಾಲೆ ಪಸರಿಸಬೇಕು ಎಂದು ಹೇಳಿದರು.


ಮುಂದುವರೆದು ಮಾತನಾಡಿದ, ವಿಭಾಗ ಅಭಾವಿಪ ಪ್ರಮುಖ್ ಶ್ರೀ ಕೇಶವ ಬಂಗೇರ ವಿದ್ಯಾರ್ಥಿ ಜೀವನವನ್ನು ಒಮ್ಮೆ ಮೆಲುಕು ಹಾಕಿದರು. ತಮ್ಮ ಬಾಲ್ಯದ ನೆನಪುಗಳ ಬುತ್ತಿಯನ್ನು ಬಿಚ್ಚಿ ಇದು ಕೇವಲ ಸಾಂಕೇತಿಕ ಕಾರ್ಯಕ್ರಮವಲ್ಲ, ಮುಂದಿನ ದಿನಗಳಲ್ಲಿ ನಮ್ಮ ಸೇವೆ ನಿಮ್ಮ ನಡುವೆ ನಿರಂತರವಾಗಿರುವುದು ಎಂದು ಹೇಳಿದರು.


ಗೌರವಾನ್ವಿತ ಕುಲಪತಿಗಳಾದ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಇವರು ನಾವು ಹೆಸರಿಗೆ ಮಾತ್ರ ಅದನ್ನು ಶಾಲೆಯನ್ನು ದತ್ತು ಪಡೆದಿಲ್ಲ ಅಲ್ಲಿನ ಅಭಿವೃದ್ಧಿ ಮಕ್ಕಳ ಕಲಿಕೆ ಅವರ ನಿತ್ಯ ಕಲಿಕೆಗೆ ನಾವು ಸದಾ ಪ್ರೋತ್ಸಾಹ  ಮಾಡುತ್ತೇವೆ. ಮೂಲಭೂತ ಸೌಕರ್ಯವನ್ನು ಒದಗಿಸಲು ನಮ್ಮ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.  


ಕಾರ್ಯಕ್ರಮದ ಕೊನೆಯಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಿಂದ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಶಿಕ್ಷಕ ವೃಂದ, ವಿ.ವಿ ಯ ಹಳೇ ವಿದ್ಯಾರ್ಥಿ ಸಂದೇಶ್ ಕೆ. ಎಲ್., ಗಿರೀಶ್ ಬಂಗೇರ, ವಿದ್ಯಾರ್ಥಿ ಪರಿಷತ್ ನ ಅಧ್ಯಕ್ಷರಾದ ಆಕಾಶ್ ರಾಜ್, ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಪತ್ ಬಿ.ಸ್ವಾಗತಿಸಿದರು, ಕೌಶಿಕ್ ಜಿ.ಕೆ. ನಿರ್ವಹಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post