ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ: ಗ್ರಾ.ಪಂ ಸದಸ್ಯರ ಅಭ್ಯಾಸ ವರ್ಗದಲ್ಲಿ ಶಾಸಕ ಭರತ್ ಶೆಟ್ಟಿ

ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ: ಗ್ರಾ.ಪಂ ಸದಸ್ಯರ ಅಭ್ಯಾಸ ವರ್ಗದಲ್ಲಿ ಶಾಸಕ ಭರತ್ ಶೆಟ್ಟಿ



ಮಂಗಳೂರು: ಭಾರತೀಯ ಜನತಾ ಪಾರ್ಟಿಗೆ ಕಾರ್ಯಕರ್ತರೇ ಜೀವಾಳ. ನಮಗೆ ಪಕ್ಷದ ಕಾರ್ಯಕರ್ತರೇ ಶಕ್ತಿ. ಪಕ್ಷದ ತತ್ವ, ಸಿದ್ಧಾಂತ ದೃಢವಾಗಿರುವುದರಿಂದ ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಬಲಿಷ್ಟವಾಗಿ ಬೆಳೆದುಬಂದಿದೆ. ಜನರ ಸೇವೆಗಾಗಿ ನಮ್ಮ ಪಕ್ಷ, ಸಂಘಟನೆ, ಕಾರ್ಯಕರ್ತರು ಶ್ರಮಿಸುತ್ತಿರುವುದರಿಂದ ಜನರ ವಿಶ್ವಾಸ ನಮ್ಮ ಪಕ್ಷದ ಮೇಲೆ ಇದೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಹೇಳಿದರು.


ಅವರು ಭಾರತೀಯ ಜನತಾ ಪಾರ್ಟಿಯ ಮಂಗಳೂರು‌‌ ಉತ್ತರ ಮಂಡಲದ ವ್ಯಾಪ್ತಿಯ ನೀರುಮಾರ್ಗ ಮಹಾಶಕ್ತಿ‌ ಕೇಂದ್ರದ ಪೆರ್ಮಂಕಿ ವಿಶಾಲ್ ಗಾರ್ಡನ್ ಆಡಿಟೋರಿಯಂ ಹಾಲ್ ನಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಈ ಸಂದರ್ಭದಲ್ಲಿ ಜಿಲ್ಲಾ ಭಾಜಪಾ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ರಾಜೇಶ್ ಕೊಟ್ಟಾರಿ ಮಂಡಲ ಪ್ರಧಾನ ಕಾರ್ಯದರ್ಶಿ, ಸಂತೋಷ್ ತುಪ್ಪೆಕಲ್ಲ್ ಜಿಲ್ಲಾ ಕಾರ್ಯಾಕಾರಿಣಿ ಸದಸ್ಯರು, ಹರಿಕೇನ್ ಶೆಟ್ಟಿ ಉಳಾಯಿಬೆಟ್ಟು ಪಂ.ಅಧ್ಯಕ್ಷರು, ಸಚಿನ್ ಹೆಗ್ಡೆ ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಕಿಶೋರ್ ಶೆಟ್ಟಿ ಸ್ಥಾನೀಯ ಸಮಿತಿ ಅಧ್ಯಕ್ಷ, ದಿನೇಶ್ ತಲ್ಲಿಮಾರ್ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಸಹಿತ ಪಕ್ಷದ ಉತ್ತರ ಮಂಡಲದ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم