ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು



ಭಾಲ್ಕಿ: ತಾಲೂಕಿನ ವರವಟ್ಟಿ (ಬಿ) ಗ್ರಾಮದಲ್ಲಿ ಬುಧವಾರ ಸೋಯಾ ರಾಶಿ ಮಾಡುವ ಸಮಯದಲ್ಲಿ, ರಾಶಿ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಸಾವನಪ್ಪಿದ ಘಟನೆಯೊಂದು ನಡೆದಿದೆ. ಸಂಗೀತಾ ಶ್ರೀಹರಿ ಬಿರಾದಾರ (35) ಮೃತ ರೈತ ಮಹಿಳೆ.


ರೈತ ಮಹಿಳೆಯ ಎರಡು ಎಕರೆ ಹೊಲದಲ್ಲಿ ಬೆಳೆದ ಸೋಯಾ ರಾಶಿಯನ್ನು ಯಂತ್ರಕ್ಕೆ ಹಾಕುವ ವೇಳೆಯಲ್ಲಿ ರೈತ ಮಹಿಳೆಯ ಸೀರೆ ಸೆರಗು ಯಂತ್ರದಲ್ಲಿ ಸಿಲುಕಿ ಈ ಘಟನೆ ಸಂಭವಿಸಿದೆ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು.


ರೈತ ಮಹಿಳೆಯ ಗಂಡ  ಶ್ರೀಹರಿ ಬಿರಾದಾರ ಹೈದರಾಬಾದ್ ಟ್ರಾನ್ಸ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ರೈತ ಮಹಿಳೆಗೆ ಒಬ್ಬ ಮಗ ಮತ್ತು ಮಗಳು ಇದ್ದು, ಬಡ ರೈತ ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ ಸಹಾಯಧನ ಒದಗಿಸಬೇಕು ಎಂದು ಗ್ರಾ.ಪಂ.ಅಧ್ಯಕ್ಷ ಶಂಕರರಾವ ರಾಮರಾವ ಬಿರಾದಾರ ಮನವಿ ಮಾಡಿದ್ದಾರೆ.


ಘಟನಾ ಸ್ಥಳಕ್ಕೆ ಉಪ ತಹಸಿಲ್ದಾರರು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಖಟಕ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments

Post a Comment

Post a Comment (0)

Previous Post Next Post