ನವದೆಹಲಿ : ಕಚ್ಚಾ ಖಾದ್ಯದ ಮೇಲಿನ ಮೂಲ ಆಮದು ಸುಂಕ ರದ್ದು ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಈ ಮೂಲಕ ತಾಳೆ ಎಣ್ಣೆ, ಸೋಯಾಬಿನ್ ಮತ್ತು ಸೂರ್ಯಕಾಂತಿ ಎಣ್ಣೆ ಲೀ.ಗೆ 15 ರೂ ಇಳಿಕೆಯಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರವು ಸಂಸ್ಕೃರಿತ ಎಣ್ಣೆಯ ಮೇಲಿನ ಸೀಮಾ ಸುಂಕ ಮತ್ತು ಕೃಷಿ ಸೆಸ್ ಅನ್ನು ಇಳಿಕೆ ಮಾಡಲು ಕೇಂದ್ರ ನಿರ್ಧರಿಸಿದ್ದು, ಅ.14 ರಿಂದ ಜಾರಿಯಾಗಲಿರುವ ಈ ಹೊಸ ತೆರಿಗೆ ನೀತಿ 2022 ರ ಮಾರ್ಚ್ 31 ರವರೆಗೂ ಜಾರಿಯಲ್ಲಿರಲಿದೆ.
ಕಚ್ಚಾ ತಾಳೆ ಎಣ್ಣೆ, ಸೊಯಾಬಿನ್ ಮತ್ತು ಸೂರ್ಯಕಾಂತಿ ಎಣ್ಣೆಗೆ ಶೇ. 20 ರಷ್ಟು ಸೀಮಾ ಸುಂಕ ಇತ್ತು. ಅದನ್ನು ಇದೀಗ ತಾಳೆ ಎಣ್ಣೆಗೆ ಶೇ.8.25ಕ್ಕೆ ಮತ್ತು ಸೋಯಾಬೀನ್, ಸೂರ್ಯಕಾಂತಿ ಎಣ್ಣೆಗೆ ಶೇ. 5.5 ಕ್ಕೆ ಇಳಿಸಲಾಗಿದೆ.
ಸಂಸ್ಕರಿತ ತಾಳೆ, ಸೋಯಾ, ಸೂರ್ಯಕಾಂತಿ ಎಣ್ಣೆ ಮೇಲಿನ ಸೀಮಾ ಸುಂಕವನ್ನು ಶೇ. 32.5 ರಿಂದ ಶೇ. 17.5 ಕ್ಕೆ ಇಳಿಸಲಾಗಿದೆ. ತಾಳೆ ಎಣ್ಣೆ ಮೇಲಿನ ಕೃಷಿ ಸೆಸ್ ಅನ್ನು 7.5 ಕ್ಕೆ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಗೆ ಶೇ. 5ಕ್ಕೆ ಇಳಿಸಲಾಗಿದೆ.
Post a Comment