ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿಯವರಿಗೆ ಅಭಿನಂದನೆ

ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿಯವರಿಗೆ ಅಭಿನಂದನೆ



ಉಜಿರೆ: ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಉಜಿರೆ ಹಾಗೂ ಲಾಯಿಲಾ ಗ್ರಾಮ ಪಂಚಾಯತ್ ಗಳಲ್ಲಿ ಸ್ವಚ್ಚತೆಗೆ ಕೈಗೊಂಡಿರುವ ಮಹತ್ವವಾದ ಯೋಜನೆಗಳನ್ನು ಗುರುತಿಸಿ ದೇಶದ ಅಮೃತ ಮಹೋತ್ಸವದ ಪ್ರಯುಕ್ತ ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಪಿ.ಎಚ್. ಅವರಿಗೆ ಸ್ವಚ್ಚತಾ ಹಿ ಸೇವಾ ಎಂಬ ಗೌರವ ಪುರಸ್ಕಾರ ದೊರೆತ ಹಿನ್ನೆಲೆಯಲ್ಲಿ ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ಬಿನ ಪರವಾಗಿ ಗಾಂಧಿ ಜಯಂತಿಯಂದು ಅಭಿನಂದಿಸಲಾಯಿತು.


ಬೆಳ್ತಂಗಡಿ ರೋಟರಿ ಅಧ್ಯಕ್ಷ ಶರತ್ ಕೃಷ್ಣ ಪಡ್ವೆಟ್ನಾಯ, ಕಾರ್ಯದರ್ಶಿ ಅಬೂಬ್ಬಕ್ಕರ್, ಆನ್ಸ್ ಅಧ್ಯಕ್ಷೆ ನವೀನಾ.ಜೆ.ಕೆ, ಕಾರ್ಯದರ್ಶಿ ಡಾ.ಭಾರತಿ ಜಿ.ಕೆ. ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಶೆಟ್ಟಿ, ಉಜಿರೆ ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲಕೃಷ್ಣ, ಶ್ರೀ.ಧ.ಮಂ. ಕಾಲೇಜಿನ ಗ್ರಾಮೀಣಾಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ಎ. ಜಯಕುಮಾರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


0 Comments

Post a Comment

Post a Comment (0)

Previous Post Next Post