ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳ: 'ಹೆಣ್ಣುಮಗು' ಕಿರುನಾಟಕ ಪ್ರದರ್ಶನ

ಧರ್ಮಸ್ಥಳ: 'ಹೆಣ್ಣುಮಗು' ಕಿರುನಾಟಕ ಪ್ರದರ್ಶನ


ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 23ನೇ ವರ್ಷದ ಭಜನಾ ತರಬೇತಿ ಕಮ್ಮಟದಲ್ಲಿ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಕುಟುಂಬವರ್ಗದವರ ಶುಭಾಶೀರ್ವಾದಗಳೊಂದಿಗೆ, ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಂಗಶಿವ ಕಲಾಬಳಗದವರಿಂದ ಶನಿವಾರ (ಅ.2) ಅಮೃತವರ್ಷಿಣಿ ಸಭಾಭವನದಲ್ಲಿ ಹೆಣ್ಣುಮಗು ಎಂಬ ಕಿರುನಾಟಕ ಪ್ರದರ್ಶನಗೊಂಡಿತು.


ಕಲಾವಿದರಾಗಿ ರಾಜೇಂದ್ರ ದಾಸ್, ಪದ್ಮರೇಖ ಜೈನ್, ಮಂಜುಳಾ, ವಿದ್ಯಾ, ಸಾಧನ, ನಾಗರಕ್ಷ ಪಾತ್ರ ನಿರ್ವಹಿಸಿದರು. ಈ ಕಿರುನಾಟಕಕ್ಕೆ ಸುನಿಲ್ ಶೆಟ್ಟಿ ಕಲ್ಕೊಪ್ಪ ಅವರ ನಿರ್ದೇಶನ, ಭಗೀರಥ್ ಕುಮಟಾ ಅವರ ಸಂಗೀತ, ಯಶವಂತ್ ಇವರ ಸಹಕಾರ ಹಾಗೂ ಹಿಮ್ಮೇಳನದಲ್ಲಿ ಶೋಧನ್ ಜೈನ್ ಹಾಗೂ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಮಮತಾ ರಾವ್ ಸಹಕರಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post