ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಾದಚಾರಿ ಮೇಲೆ ಟ್ರಕ್ ಹರಿದು ವ್ಯಕ್ತಿ ಸಾವು

ಪಾದಚಾರಿ ಮೇಲೆ ಟ್ರಕ್ ಹರಿದು ವ್ಯಕ್ತಿ ಸಾವು

 


ಯಳಂದೂರು: ಪಟ್ಟಣದ ಬಸ್ ನಿಲ್ದಾಣದ ಬಳಿ ಮಂಗಳವಾರ ಬೆಳಿಗ್ಗೆ ರಸ್ತೆಯಲ್ಲಿ ಸಾಗುತ್ತಿದ್ದ ಪಾದಚಾರಿ ಮೇಲೆ ಟ್ರಕ್ ಹರಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆಯೊಂದು ತಾಲ್ಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಮರಿಸ್ವಾಮಿ 45 ವರ್ಷ ಮೃತಪಟ್ಟವರು.

ಇವರು ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸಂತೆಮರಹಳ್ಳಿ ಕಡೆಯಿಂದ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಕೂಡಲೇ ಕೆಳಕ್ಕೆ ಬಿದ್ದ ಇವರ ತಲೆಯ ಮೇಲೆ ಹಿಂಬದಿಯ ಚಕ್ರ ಹರಿದಿದ್ದು ಸ್ಥಳದಲ್ಲೇ ಇವರು ಮೃತಪಟ್ಟಿದ್ದಾರೆ.


ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು. ಟ್ರಕ್ ಹಾಗೂ ಇದರ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಚಾಮರಾಜನಗರಕ್ಕೆ ರವಾನಿಸಲಾಗಿದೆ. ಮೃತರ ತಾಯಿ ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


0 Comments

Post a Comment

Post a Comment (0)

Previous Post Next Post