ಬಾಗಲಕೋಟೆ: ಲೈನ್ ದುರಸ್ತಿ ವೇಳೆಯಲ್ಲಿ ವಿದ್ಯುತ್ ಪ್ರವಹಿಸಿ ಲೈನ್ಮ್ಯಾನ್ ಸಾವನ್ನಪ್ಪಿದ ದುರಂತ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚಿತ್ತರಗಿ ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ಕಂಬದಲ್ಲೇ ಮೆಸ್ಕಾಂ ಗುತ್ತಿಗೆದಾರ ಕಾರ್ಮಿಕ ಸಾವನ್ನಪ್ಪಿದ್ದಾರೆ. ಚಿತ್ತರಗಿ ಗ್ರಾಮದಲ್ಲಿ 33 ವರ್ಷದ ಹನುಮಂತ ಮುಕಾಶಿ ಮೃತಪಟ್ಟಿದ್ದಾರೆ.
ಬಿ.ಎನ್. ಜಾಲಿಹಾಳ ಗ್ರಾಮದ ಹನುಮಂತ ಮುಕಾಶಿ ಮೃತ ದುರ್ದೈವಿ. ಟ್ರಾನ್ಸ್ಫಾರ್ಮರ್ ಅಳವಡಿಸುವಾಗ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.
ಲೈನ್ ಕ್ಲಿಯರ್ ಇಲ್ಲದೆ ಕಂಬ ಏರಿಸಿ ಗುತ್ತಿಗೆದಾರನ ಎಡವಟ್ಟಿನಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
إرسال تعليق