ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯುವತಿ ನೇಣಿಗೆ ಶರಣು

ಯುವತಿ ನೇಣಿಗೆ ಶರಣು

 


ಮೈಸೂರು: ಬಡತನ ಹಾಗೂ ಅನಾರೋಗ್ಯಕ್ಕೆ ಮನನೊಂದ ಯುವತಿ ನೇಣಿಗೆ ಶರಣಾಗಿರುವ ಘಟನೆಯೊಂದು ಮೈಸೂರಿನ ಜನತಾ ನಗರದಲ್ಲಿ ನಡೆದಿದೆ. ರಕ್ಷಿತಾ (20 ವರ್ಷ) ಮೃತ ದುರ್ದೈವಿ.


ಆಟೋ ಓಡಿಸಿಕೊಂಡು ಕುಟುಂಬಕ್ಕೆ ಆಧಾರವಾಗಿದ್ದ ತಂದೆ ಮಹದೇವ್, ಗ್ಯಾಂಗ್ರಿನ್‌ನಿಂದಾಗಿ ಕಾಲು ಕಳೆದುಕೊಂಡಿದ್ದರು.


ತಾಯಿ ಶೀಲಾ ಮನೆ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ರಕ್ಷಿತಾ ಅನಾರೋಗ್ಯದಿಂದ ಬಳಲುತ್ತಿದ್ದರು.


ಒಂದು ಕಡೆ ಆದಾಯವಿಲ್ಲ, ಮತ್ತೊಂದು ಕಡೆ ಬಡತನದಿಂದ ಬೇಸತ್ತು ಯುವತಿ ನೇಣಿಗೆ ಶರಣಾಗಿದ್ದಾಳೆ. 


ಈ ಬಗ್ಗೆ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 تعليقات

إرسال تعليق

Post a Comment (0)

أحدث أقدم