ಚಿತ್ತಾಪುರ: ನಗರದ ಎಸಿಸಿ ಸಿಮೆಂಟ್ ಕಾರ್ಖಾನೆಯ ನ್ಯೂ ಪ್ಲಾಂಟ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಕಾರ್ಮಿಕ ಮೃತಪಟ್ಟ ಘಟನೆಯೊಂದು ಶುಕ್ರವಾರ ಬೆಳಗಿನ ಜಾವ ಸಂಭವಿಸಿದೆ. ಇಂಗಳಗಿ ಗ್ರಾಮ ನಿವಾಸಿ ಸುಭಾಷ ರಾಠೋಡ (51)ವರ್ಷ ಮೃತ ದುರ್ದೈವಿ.
ಕಂಪನಿಯ ತಾಜ್ ಗ್ರೂಪ್ ಗುತ್ತಿಗೆ ಕಾರ್ಮಿಕ ಸುಭಾಷ ರಾಠೋಡ, ರಾತ್ರಿ ಪಾಳಿ ಕೆಲಸಕ್ಕೆ ಹಾಜರಾಗಿದ್ದ. ಗೂಡ್ಸ್ ರೈಲಿಗೆ ಸಿಮೆಂಟ್ ಚೀಲಗಳ ಲೋಡಿಂಗ್ ಮಾಡುತ್ತಿದ್ದ ವೇಳೆ ಬೆಲ್ಟ್ ಮತ್ತು ಯಂತ್ರದ ಹೊಡೆತದಿಂದ ಸುಮಾರು 25 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದ್ದು, ಸುಡುವ ಸಿಮೆಂಟ್ ಧೂಳಿನಲ್ಲಿ ಬಿದ್ದ ಪರಿಣಾಮ ಉಸಿರಾಟದ ಮೂಲಕ ಸಿಮೆಂಟ್ ದೇಹ ಸೇರುವ ಜತೆಗೆ ರೈಲು ಹಳಿಗೆ ತಲೆ ಪೆಟ್ಟಾಗಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ವಿಷಯ ತಿಳಿದು ಕಂಪನಿ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Post a Comment