ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಚುನಾವಣೆ

ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಚುನಾವಣೆ

ವಿದ್ಯಾವಂತ ಹಾಗೂ ಸೇವಾಮನೋಭಾವ ಇರುವ ನಾಯಕರು ಬೇಕು: ಸುಬ್ರಹ್ಮಣ್ಯ ನಟ್ಟೋಜ




ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನಡೆದ 2021-22ರ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿಯ ಪ್ರೀತಲ್ ದಯಾನಂದ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿಯ ಮೋಹಿತ್ ಕೆ.ಎಸ್ ಆಯ್ಕೆಯಾದರು.


ಈ ಸಂದರ್ಭದಲ್ಲಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಭಾರತವೆಂಬ ಪವಿತ್ರ ಜಾಗವನ್ನು ನಿಭಾಯಿಸುವ ವಿದ್ಯಾವಂತ, ಸೇವಾ ಮನೋಭಾವವಿರುವ ನಾಯಕರು ನಮ್ಮ ದೇಶಕ್ಕೆ ಬೇಕು. ಇಂತಹ ನಾಯಕರ ಸೃಷ್ಟಿಗೆ ಪ್ರಜಾಪ್ರಭುತ್ವದ ತಳಹದಿಯ ಮೇಲೆ ರೂಪುಗೊಳ್ಳುವ ಚುನಾವಣಾ ಪ್ರಕ್ರಿಯೆ ಅತ್ಯಂತ ಅಗತ್ಯ. ಅದರ ಅನುಭವವನ್ನು ಕಟ್ಟಿಕೊಡುವಲ್ಲಿ ವಿದ್ಯಾರ್ಥಿ ಚುನಾವಣೆಗಳು ಸಹಾಯ ಮಾಡುತ್ತವೆ ಎಂದು ಹೇಳಿದರು.


75 ವರ್ಷಗಳಲ್ಲಿ ನಾವು ಅನುಭವಿಸಿದ್ದು ಸ್ವಾತಂತ್ರ್ಯವಲ್ಲ, ಅದು ಸ್ವೇಚ್ಚಚಾರ. ಪ್ರಸ್ತುತ ಸಮಾಜದಲ್ಲಿ ಕೈ ತುಂಬಾ ಸಂಬಳ ಪಡೆಯುವ ವಿದ್ಯಾವಂತರು ಸ್ವೇಚ್ಚಚಾರವನ್ನು ತಮ್ಮದಾಗಿಸಿಕೊಂಡಿದ್ದಾರೆ. ನಮ್ಮ ಸ್ವಾತಂತ್ರ ಹೋರಾಟಗಾರರು ಕಂಡ ಸ್ವತಂತ್ರ ಭಾರತದ ಕನಸು  ನನಸಾಗಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ಪ್ರಜೆಗಳದ್ದು. ವಿದ್ಯಾರ್ಥಿ ನಾಯಕರುಗಳಿಗೆ ಅಗಾಧ ಶಕ್ತಿ ಇದೆ. ವಿದ್ಯಾರ್ಥಿ ನಾಯಕರು ಸೇವಾ ಗುಣವನ್ನು ಬೆಳೆಸಿಕೊಂಡು, ಯೌವನವನ್ನು ಸರಿಯಾದ ರೀತಿಯಲ್ಲಿ ಬಳಸಿ, ಸಮಾಜಕ್ಕೆ ಕೃತಜ್ಞತಾ ಭಾವದಿಂದ ಸೇವೆ ಮಾಡಬೇಕು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರಂತ ರಾಜಕಾರಣಿಗಳು ದೇಶಕ್ಕೆ ಬೇಕಾಗಿದ್ದಾರೆ ಶಾಸ್ತ್ರಿಯವರದು ಪರ್ವತದ ವ್ಯಕ್ತಿತ್ವ ಎಂದು ನುಡಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಶಂಕರನಾರಾಯಣ ಭಟ್, ಕ್ಯಾಂಪಸ್ ನಿರ್ದೇಶಕ ಭಾಸ್ಕರ್ ಶೆಟ್ಟಿ,  ಕಾಲೇಜಿನ ಚುನಾವಣಾ ಅಧಿಕಾರಿ ಸುಚಿತ್ರ ಪ್ರಭು ಹಾಗೂ ಉಪ ಚುನಾವಣಾ ಅಧಿಕಾರಿ ತಿಲೋಶ್ ಕುಮಾರ್ ಬಾಯಾರು ಅವರು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಶ್ರೇಯ ಭಟ್ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post